Haridasa Sahitya — Vyasadasa

Olide yaatakammaa lakumi

ಒಲಿದೆ ಯಾತಕಮ್ಮಾ ಲಕುಮಿ

Composer: Haridasa · Deity: Lakshmi Devi · Genre: Dasara Pada

Kannada lyrics

ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ? ಹಲವಂಗದವನ ಹವಣೆ ತಿಳಿದೂ ತಿಳಿದೂ ತಿಳಿಯದ ಹಾಗೆ! || ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು ರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನು ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ || ಲಲಿತೆ ಚಾರುಶೀಲೆ ನೀನು ಕಲ್ಕಿ ಕಲಹಪ್ರಿಯನವನು ಕುಲದ ಕುರುಹು ಇಲ್ಲ ಗುಣದ ನೆಲೆಯು ಕಂಡಿಲ್ಲ ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು ಜಲಧಿ ಆಲದೆಲೆಯ ಮೇಲೆ ಮಲಗಿ ಬೆರಳ ಚೀಪುವವನಿಗೆ || ಸ್ವರತಾನಪೇಕ್ಷಾಕಾಮಿ ನಿದ್ರಾಹೀನ ಅನಶನಿಯು ಪರುಷರೂಪ ವಾಚ್ಯ ಶಬ್ದ ಅಮಿತ ಭೋಕ್ತನು ಗುರುಗೋಪಾಲ ವಿಠ್ಠಲನು ನಿರುತ ತನ್ನ ವಕ್ಷದೊಳು ಅರಮನೆಯ ಮಾಡಿಕೊಂಡು ಮರುಳು…

Transliteration

Olide yaatakammaa lakumi vaasudevage || pa || Halavangadavana havane tilidu tilidu tiliyada haage || a.pa || Kamalagandhi komalaangi sundaraabjavadane neenu | Ramana matsya kathina kaaya sookaraasyanu || Ramaneeya swaroopi neenu amita gora roopanavanu | Namiparishtadaani neenu daanava beduvavanige || 1 || Lalita chaaru sheele neenu kalki kalaha preeyanavanu | Kulada kuruhu illaa gunada neleya kand…