Haridasa Sahitya — Vyasadasa
Nyayave ninage
ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ
Composer: Vyasarajaru · Deity: Vishnu · Genre: Bhakti
Kannada lyrics
ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ ಬಾಯಾಡಬಹುದೆ ಕೈಯೊಳಿತ್ತ ಹಣಗಳ ।।ಪ।। ಆರು ಅರಿಯರು ಹಾಗೆ ಒಂಬತ್ತು ಕೊಡುವಾಗ ತೋರಿಯಾಡಿದೆ ಒಮ್ಮೆ ನಿನ್ನ ಹೆಸರ ಗಾರು ಮಾಡದೆ ಬಡ್ಡಿತೆತ್ತು ಬರುವೆನೆಂದು ಪೂರೈಸಿ ಕೊಡದೆ ಚುಂಗಡಿಯ ನಿಲಿಸುವರೆ ।।೧।। ಸಾಲವ ಬೇಡಿದರೆ ಕೋಪವೇ ಕಮಲಾಕ್ಷ ಕಾಲಿಗೆನ್ನ ಕೊರಳ ಕಟ್ಟಿಕೊಂಬೆ ಆಲಯದವರ ಕೇಳದೆ ಒಳಗಾದೆನೊ ಭೋಳೆಯತನದಲಿ ನಿನ್ನ ನಂಬಿದೆ ಹರಿಯೆ ।।೨।। ಅಸಲು ನಿನಗೆ ಸಮರ್ಪಣೆ ಆಯಿತೆಲೊ ದೇವ ಮೀಸಲು ಪೊಂಬೆಸರುನಿರುತ ನಡೆಯಲಿ ಶಶಿಧರ ಬ್ರಹ್ಮಾದಿವಂದ್ಯ ಸತ್ಯವೆಂಬ ಬಿರುದು ಮೀಸಲು ಉಳುಹಿ ಎನ್ನ ಸಲಹಯ್ಯ ಸಿರಿಕೃಷ್ಣ ।।೩।।
Transliteration
Nyayave ninage enage sirikrushna Bayadabahude kaiyolitta hanagala ||pa|| Aru ariyaru hage ombattu koduvaga Toriyadide omme ninna hesara Garu madade badditettu baruvenendu Puraisi kodade cungadiya nilisuvare ||1|| Salava bedidare kopave kamalaksha Kaligenna korala kattikombe Alayadavara kelade olagadeno Boleyatanadali ninna nambide hariye ||2|| Asalu ninage samarpane Ayitelo deva Misalu pombesaruni…