Haridasa Sahitya — Vyasadasa
Noduvude kannu keluvude kivi
ನೋಡುವುದೇ ಕಣ್ಣು ಕೇಳುವುದೇ ಕಿವಿ
Composer: Purandara Dasaru · Deity: Hari · Genre: Philosophy
Kannada lyrics
ನೋಡುವುದೇ ಕಣ್ಣು ಕೇಳುವುದೇ ಕಿವಿ ಪಾಡುವುದೇ ವದನ||pa|| ಗಾಡಿಕಾರ ಶ್ರೀ ವೇಣುಗೋಪಾಲನ ಕೂಡಿ ಕೊಂಡಾಡುವ ಸುಖದ ಸೊಬಗನು||apa|| ಪೊಂಗಳಲೂದುತ ಮೃಗಪಕ್ಷಿಗಳನೆಲ್ಲ ಸಂಗಳಿಸುತಲಿಪ್ಪನ ಅಂಗಜ ಜನಕ ಗೋಪಾಂಗನೇರೊಡನೆ ಬೆಳ- ದಿಂಗಳೊಳಗೆ ಸುಳಿದಾಡೊ ರಂಗಯ್ಯನ||1|| ನವಿಲಂತೆ ಕುಣಿವ ಹಂಸೆಯಂತೆ ನಲಿವ ಮರಿ ಕೋಗಿಲೆಯಂತೆ ಕೂಗುವ ಎರಳೆಯ ಮರಿಯಂತೆ ಜಿಗಿಜಿಗಿದಾಡುವ ತುಂಬಿ ಝೇಂಕರಿಸುವಂದದಿ ಝೇಂಕರಿಪನ||2|| ಮುರುಡು ಕುಬ್ಜೆಯ ಡೊಂಕು ತಿದ್ದಿ ರೂಪವ ಮಾಡಿ ಸೆರೆಯ ಬಿಡಿಸಿಕೊಂಬನ ಗರುಡಗಮನ ಸಿರಿ ಪುರಂದರವಿಠಲನ ಶರಣಾಗತ ಸುರಧೇನು ರಂಗಯ್ಯನ||3|| Noduvude kannu keluvude kivi Paduvude vadana||pa||
Transliteration
Gadikara sri venugopalana Kudi kondaduva sukada sobaganu||apa|| Pongalaluduta mrugapakshigalanella Sangalisutalippana Angaja janaka gopanganerodane bela- Dingalolage sulidado ramgayyana||1|| Navilante kuniva hamseyante naliva Mari kogileyante kuguva Eraleya mariyante jigijigidaduva Tumbi jenkarisuvamdadi jenkaripana||2|| Murudu kubjeya Donku tiddi rupava madi Sereya bidisikombana Garudagamana siri…