Haridasa Sahitya — Vyasadasa
Nodu nodu teekacharyara
ನೋಡು ನೋಡು ಟೀಕಾಚಾರ್ಯರ
Composer: Vyasa Tatvagna Teertharu · Deity: Jayateertharu · Genre: Dasara Pada
Kannada lyrics
ನೋಡು ನೋಡು ಟೀಕಾಚಾರ್ಯರ ಮಾಡು ವಂದನೆಗಳ ಬೇಡು ವರಗಳನ್ನು ||pa|| ದುರ್ಮಾಯಿ ಮತಗಳ ಮರ್ಮ ಭೇದಿಸಿ ಸುಧಾ ನಿರ್ಮಾಣ ಮಾಡಿದ ಆರ್ಯರ ||1|| ಲಲಿತೋಧ್ರ್ವ ಪುಂಡ್ರ ಶ್ರೀ ತುಲಸೀಭೂಷಿತ ಕರ್ನ ವಿಲಸಿತ ಕಾಪಾಯಧಾರ್ಯರ ||2|| ಯಾವಾಗಲೂ ವಾಸುದೇವವಿಠಲನ್ನ ಸೇವಿಸುವರ ಭಜಿಸುವರ ||3||
Transliteration
nODu nODu TIkAcAryara mADu vandanegaLa bEDu varagaLannu ||pa|| durmAyi matagaLa marma BEdisi sudhA nirmANa mADida Aryara ||1|| lalitOdhrva punDra SrI tulasIBUShita karna vilasita kApAyadhAryara ||2|| yAvAgalU vAsudEvaviThalanna sEvisuvara Bajisuvara ||3||