Haridasa Sahitya — Vyasadasa
Nodu nodu nodu krushna
ನೋಡು ನೋಡು ನೋಡು ಕೃಷ್ಣ
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತಾನೆ ಬೇಡಿಕೊಂಡರೆ ಬಾರ ಕೃಷ್ಣ, ಓಡಿ ಹೋಗುತಾನೆ ||ಪ|| ಕಂಡಕಂಡವರ ಮೇಲೆ ಕಣ್ಣ ಹಾಕುತಾನೆ ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ ||೨|| ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ ಶರಣು ಹೊಕ್ಕರೆಯು ತಾನೆ ಕೊಡಲಿ ಮಸೆಯುತಾನೆ ಹರಿಯುವ ವಾನರರ ಕೂಡ ಹಾರಾಡುತಾನೆ ಸಿರಿಕೃಷ್ಣ ಹಾಲು-ತುಪ್ಪ ಸೂರೆಮಾಡುತಾನೆ ||೩|| ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ ನೀಲಗುದುರೆಯನೇರಿ ಹಾರಿಸಾಡುತಾನೆ ಬಾಲಕರ ಕೂಡಿಕೊಂದು ಕುಣಿದಾಡುತಾನೆ ಲೋಲಪುರಂದರವಿಠಲ ತಾನು ಕುಣಿಯುತಾನೆ||೪||
Transliteration
Nodu nodu nodu krushna |hege madutane | Bedikondare bara krushna |odi hogutane ||pa|| Kanda kandavara mele kannu hakutane | Undu undu musukanittu malagikollutane || Landatanava madi madi manna gorutane | Bandu madi bagilolage cirikollutane ||1|| Karunavilladale bandu kalalodeyutane | Saranu hokkareyu tanu kodali maseyutane || Hariyuva vanarara koda haradutane | Sirikrushna halu – tuppa suremadutan…