Haridasa Sahitya — Vyasadasa

Nodele manave kondadu

ನೋಡೆಲೆ ಮನವೆ ಕೊಂಡಾಡು

Composer: Guru Shreesha Vitthala Dasaru · Deity: Raghavendra Teertharu · Genre: Dasara Pada

Kannada lyrics

ನೋಡೆಲೆ ಮನವೆ ಕೊಂಡಾಡು ಗುರುಗಳ ಪಾದ-ಈಡು ಇಲ್ಲವೊ ಪುಣ್ಯಕೆ || ಪ || ನಾಡೊಳಗೆ ಗುರುರಾಘವೇಂದ್ರ ರಾಯರ ಸೇವೆ-ಮಾಡಿದವ ಪರಮ ಧನ್ಯ – ಮಾನ್ಯ || ಅ || ನಿಷ್ಠೆಯಿಂದಲಿ ಸ್ಮರಿಸೆ ಕಷ್ಟಗಳು ದೂರ ಮನೋ-ಭೀಷ್ಟಗಳ ಪೂರೈಪರೋ ಅಷ್ಟಸೌಭಾಗ್ಯವನೆ ಕೊಟ್ಟು ಸುಜನರಿಗೆ ಶ್ರೀ-ವಿಷ್ಣುದಾಸ್ಯವ ತೋರ್ಪರೋ ದೃಷ್ಟಿಯಿಂದಲಿ ನೋಡಲನೇಕ ಜನ್ಮದ ಪಾಪ-ಬಿಟ್ಟು ಪೋಪವೊ ಕ್ಷಣದಲಿ ಎಷ್ಟು ಹೇಳಲಿ ಇವರ ನಿಷ್ಠ ಮಹಾತ್ಮ್ಯೆಯನು-ದುಷ್ಟರಿಗೆ ದೊರೆಯದಿವರ ಸೇವಾ || ೧ || ಹಲವು ಕ್ಷೇತ್ರಗಳೇಕೆ ಹಲವು ತೀರ್ಥಗಳೇಕೆ-ಫಲ ಸುಲಭದಲ್ಲಿರಲು ಬಲವು ಇದ್ದದ್ದರೊಳು ಪ್ರದಕ್ಷಿಣೆ ಸುಪದಜಲ-ತಲೆಯಲ್ಲಿ ಧರಿಸಿ ನಿತ್ಯ ಮಲರಹಿತನು ಆಗಿ ದಂಡಪ್ರಣಾಮವ ಮಾಡೆ-ಒಲಿವರು ಕರುಣದಲ…

Transliteration

Nodele manave kondadu gurugala pada-idu illavo punyake || pa || Nadolage gururaghavendra rayara seve-madidava parama dhanya – manya || a || Nishtheyindali smarise kashtagalu dura mano-bishtagala puraiparo Ashtasaubagyavane kottu sujanarige sri-vishnudasyava torparo Drushtiyindali nodalaneka janmada papa-bittu popavo kshanadali Eshtu helali ivara nishtha mahatmyeyanu-dushtarige doreyadivara seva ||…