Haridasa Sahitya — Vyasadasa

nIrillada BAvi Urillada maThavu

ನೀರಿಲ್ಲದ ಭಾವಿ ಊರಿಲ್ಲದ ಮಠವು

Composer: Vyasarajaru · Deity: Hari · Genre: Ugabhoga

Kannada lyrics

ನೀರಿಲ್ಲದ ಭಾವಿ ಊರಿಲ್ಲದ ಮಠವು ನೆರಳಿಲ್ಲದ ಮರ ಫಲವಿಲ್ಲದ ಲತೆ ಧನವಿಲ್ಲದ ದಾತ ದಯವಿಲ್ಲದ ನಾಥ ಮನಸಿಲ್ಲದ ಶಕುತಿ ಭಯವಿಲ್ಲದ ಭಕುತಿ ನರಹರಿ ಮುಕುಂದ ಶ್ರೀಕೃಷ್ಣ ಎನ್ನದ ನರರಿದ್ದು ಫಲವೇನು ಇಲ್ಲದಿದ್ದರೆ ಏನು ||

Transliteration

nIrillada BAvi Urillada maThavu neraLillada mara Palavillada late dhanavillada dAta dayavillada nAtha manasillada Sakuti Bayavillada Bakuti narahari mukunda SrIkRuShNa ennada narariddu PalavEnu illadiddare Enu