Haridasa Sahitya — Vyasadasa

Ninnungutavu bommandavanodeyitu

ನಿನ್ನುಂಗುಟವು ಬೊಮ್ಮಾಂಡವನೊಡೆಯಿತು

Composer: Purandara Dasaru · Deity: Hari · Genre: Ugabhoga

Kannada lyrics

ನಿನ್ನುಂಗುಟವು ಬೊಮ್ಮಾಂಡವನೊಡೆಯಿತು ನಿನ್ನ ನಡೆ ಜಗವ ಈರಡಿ ಮಾಡಿತು ನಿನ್ನ ಪೊಕ್ಕಳು ಸರಸಿಜನಾಭನ ಪಡೆಯಿತು ನಿನ್ನ ವಕ್ಷಸ್ಥಳ ಸಿರಿಲಕುಮಿಗೆಡೆಯಾಯಿತು ನಿನ್ನ ನಳಿದೋಳು ಸಿರಿಲಕುಮಿಯ ಬಿಗಿದಪ್ಪಿತು ನಿನ್ನ ಕುಡಿನೋಟ ಸಕಲ ಜೀವರ ಪೊರೆಯಿತು ನಿನ್ನ ತೊದಲುನುಡಿ ಸಕಲ ವೇದವ ಸವಿಯಿತು ನಿನ್ನ ಅವಯವಂಗಳ ಮಹಿಮೆಯನು ಒಂದೊಂದು ಪೊಗಳಲಳವಲ್ಲ ಸಿರಿಪುರಂದರ ವಿಠಲರೇಯ ನಿನ್ನ ಅಪಾರಮಹಿಮೆಗೆ ನಮೋ ನಮೋ ಎಂಬೆ ||

Transliteration

Ninnungutavu bommandavanodeyitu Ninna nade jagava iradi maditu Ninna pokkalu sarasijanabana padeyitu Ninna vakshasthala sirilakumigedeyayitu Ninna nalidolu sirilakumiya bigidappitu Ninna kudinota sakala jivara poreyitu Ninna todalunudi sakala vedava saviyitu Ninna avayavamgala mahimeyanu ondondu Pogalalalavalla siripurandara vithalareya Ninna aparamahimege namo namo embe ||