Haridasa Sahitya — Vyasadasa

Ninne irulinali

ನಿನ್ನೆ ಇರುಳಿನಲಿ

Composer: Gopala Dasaru · Deity: Krishna / Govinda / Mukunda · Genre: Bhakti

Kannada lyrics

ನಿನ್ನೆ ಇರುಳಿನಲಿ ಚೆನ್ನಿಗ ಪುರುಷನು ಎನ್ನ ಮಂದಿರಕೆ ಬಂದಿರುವ ಇವನ್ಯಾರೆ ಅವ್ವ ।।ಪ॥ ಕಣ್ಣು ಬಿಡುತಲೆ ಬೆನ್ನೊಳಗಡಗಿಸಿ ತನ್ನ ಮೋರೆತ್ತಿ ನೋಡನೆ ಬಾಯಾರಿಹನೆ ಮಣ್ಣು ನಲುವುತಾನೆ ತನ್ನೊಳು ಕಾದಿ ಉಣದೆ ಹೆಣ್ಣುಗಳನೆ ಮೋಹಿಸುವ ಹಯನೇರಿ ಮೆರೆವ ।।೧।। ಜಲವ ಬಿಟ್ಟರೆ ಸತತ ನೆಲನೆ ಕೆದರುತಲಿಪ್ಪ ಪಲ್ಗಿರಿದು ದಾನವ ಬೇಡುವ ಪೆತ್ತವಳನೆ ಜರಿವ ಶಿಲೆಯ ಮಾತಾಡಿಸುವ ಕೊಳಲೂದಿ ಕೃತ್ಯವೇದ ಹಳಿವ ಹಗೆಗಳನೆ ಸದೆಬಡಿವ ಹಯನೇರಿ ಮೆರೆವ ।।೨।। ಚರಣ ರೋಮಗಳಿಲ್ಲ ಮಗನ ಮುಗಿಲೆ ಬಂದ ಎರಡು ರೂಪದಿ ಬಾಲಕ ಬಾಹುಜಕುಲಗೊಯ್ಕ ಅರಸಾಗಿ ಗೋಪಾಲವಿಠಲ ಮೋಹಖಳರ ತರಿವ ತನ್ನಾಳಾಗನೆ ಪಾರವ ಹಯನೇರಿ ಮೆರೆವ ।।೩।।

Transliteration

Ninne irulinali chenniga purushanu Enna mamdirake bandiruva ivanyare avva ||pa|| Kannu bidutale bennolagadagisi Tanna moretti nodane bayarihane Mannu naluvutane tannolu kadi unade Hennugalane mohisuva hayaneri mereva ||1|| Jalava bittare satata nelane kedarutalippa Palgiridu danava beduva pettavalane jariva Sileya matadisuva kolaludi krutyaveda Haliva hagegalane sadebadiva hayaneri mereva ||2|| Ca…