Haridasa Sahitya — Vyasadasa

Ninna olumeyindha

ನಿನ್ನ ಒಲುಮೆಯಿಂದ

Composer: Vijaya Dasaru · Deity: Hari · Genre: Miscellaneous

Kannada lyrics

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ|| ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ವಸನ ವರ್ಣವರ್ಣದಿಂದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ ಸಂಜೀತನಕ ಇದ್ದು ಸಣ್ಣ ಸವಟು ತುಂಬ ಗಂಜಿ ಕಾಣದೆ ಬಳಲಿದೆನೊ ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ ಭುಂಜಿಸುವದು ಮತ್ತೇನೋ ? ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ ತಬ್ಬಿಬ್ಬುಗೊಂಡೆ ನಾ ಹಿಂದೆ ನಿಬ್ಬರದಲಿ ಸರ್ವರ ಕೂಡಿನ್ನು ಹಬ್ಬವನುಂಡೆನೊ ಹರಿಯೆ ಮನೆಮನೆ ತಿರುಗಿದೆ ಕಾಸು ಪುಟ್ಟದೆ ಸುಮ್ಮನೆ ಜಾಲವರಿದು ಬಾಹೇನು ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ ಎನಗೆ ಪ್ರಾಪುತಿ ನೋ…

Transliteration

Ninna olumeyinda nikhila janaru bandu mannisuvaru maharaya enna punyagalinda E pari yunteno ninnade sakala sampathu Jirnamalina vastra kanada manujage purnavichitra suvasana Varna varnadinda bahodeno sampurna gunarnava deva Sanji tanaka iddu sanna soutina tumba ganji kanade balalideno Vyanjana modalada nana rasangala bhujisuvudu matteno Obba hengasina hottege hakuvudakke tabbibbugondeno hinde Nirb…