Haridasa Sahitya — Vyasadasa

Ninna nambida narage

ನಿನ್ನ ನಂಬಿದ ನರಗೆ

Composer: Sri Venugopala Dasaru · Deity: Vijaya Dasaru · Genre: Dasara Pada

Kannada lyrics

ನಿನ್ನ ನಂಬಿದ ನರಗೆ ಅನ್ಯರಾಶ್ರಯವೇಕೋಚನ್ನ ಗುರು ವಿಜಯರಾಯ ಬನ್ನ ಬಡುವೆನೊ ಜೀಯ ಘನ್ನ ಭವದೊಳು ಶಿಲ್ಕಿಇನ್ನು ಕಡೆಗ್ಹಾಕೋ ಬ್ಯಾಗ ಈಗ ||pa|| ಸಪ್ತ ದ್ವೀಪಾಧಿಪನ ಪುತ್ರನೊಬ್ಬನ ಪರರಭೃತ್ಯನಾಗುವುದುಚಿತವೆ ವತ್ತಿ ಸುರನದಿ ನರನ ಸುತ್ತ ಪರಿಯಲು ನೀರಿಗಾರ್ತನಾಗುವುದುಚಿತವೆ ಮತ್ತೆ ಸುರಧೇನುವಿನ ಹತ್ತಿಲಿರುವ ಯಿನ್ನುಹಸ್ತು ಬಳಲುವುದುಚಿತವೆ ನಿತ್ಯ ಸುಖದಾರಿ ವಿಚಿತ್ರ ನೀ ತೋರೆ ನಾಹಸ್ತ ನರಗೊಡ್ಡುವುದು ಯತ್ನ ಉಚಿತವೆ ಗುರುವೆ ||1|| ಕ್ಷೀರವಾರಿಧಿ ಸೇರಿ ನೀರ ಮಜ್ಜಿಗೆಗಾಗಿಚೀರಿ ವರಲುವುದುಚಿತವೆ | ನೂರಾರು ವಸನದ ಹೇರು ಮನೆಯೊಳಗಿರಲುಕೋರಿ ವುಡುವುದು ವುಚಿತವೆ | ವಾರವಾರಕೆ ಹರಿಯ ತೋರುವರನ ಬಿಟ್ಟುಕ್ರೂರ ವನ ಸೇವಿಸುವ ದಾ…

Transliteration

ninna naMbida narage anyarASrayavEkOcanna guru vijayarAya banna baDuveno jIya Ganna BavadoLu Silki^^innu kaDeg~hAkO byAga Iga ||pa|| sapta dvIpAdhipana putranobbana pararaBRutyanAguvuducitave vatti suranadi narana sutta pariyalu nIrigArtanAguvuducitave matte suradhEnuvina hattiliruva yinnuhastu baLaluvuducitave nitya suKadAri vicitra nI tOre nAhasta naragoDDuvudu yatna ucitave guruve ||1|| kShIrav…