Haridasa Sahitya — Vyasadasa

Ninna darushanakke bandavanallavo

ನಿನ್ನ ದರುಶನಕೆ ಬಂದವನಲ್ಲವೊ

Composer: Vijaya Dasaru · Deity: Srinivasa / Venkatesha · Genre: Bhakti

Kannada lyrics

ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ||pa|| ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ ಇಲ್ಲಿಗೆ ಬರುವ ಕಾರಣವಾವುದೊ ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ||1|| ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ ಮರಳಿ ಗಾವುದ ಎಣಿಸಿ ಬರಲ್ಯಾತಕೊ ನೆರೆ ನಂಬಿದವರಿಗೆ ಆವಲ್ಲಾದರೇನು ಅರಿದವರ ಮನದೊಳಗೆ ನಿಂದಾಡುವ ಚಂದವಾ ||2|| ಕಠಿನವೊ ನಿನ್ನ ಭಕುತರನ ನೋಡುವ ಲಾಭ ಸಟೆಯಲ್ಲಾ ವೇದಗಳು ಸಾರುತಿವಕೊ ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ||3|| ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು e್ಞÁನಿಗಳು ಎಂತು ಬರುವರೊ ಅಲ್ಲಿಗೆ ಅನ…

Transliteration

Ninna darushanakke bandavanallavo / punyavanthara divya charana nodalu bande maha punyavanthara divya charana nodalu bande || Yelli nodalu neena vyapthanagiralikke illige baha karanavahudo Sollige kambadolu thorida maha mahima alli illenayya balla bakuthara janarige||1|| karadagale oodi bandhodaguvo deva marali gavudha venisi baralathako nera nambidavarigavalli aadare yenu anthavara manadalli nind…