Haridasa Sahitya — Vyasadasa

Nine kartanu akarta siri ajabavadi indradyamararu

ನೀನೆ ಕರ್ತನು ಅಕರ್ತ ಸಿರಿ ಅಜಭವಾದಿ ಇಂದ್ರಾದ್ಯಮರರು

Composer: Purandara Dasaru · Deity: Hari · Genre: Ugabhoga

Kannada lyrics

ನೀನೆ ಕರ್ತನು ಅಕರ್ತ ಸಿರಿ ಅಜಭವಾದಿ ಇಂದ್ರಾದ್ಯಮರರು ನೀನೆ ಸ್ವತಂತ್ರ ಅಸ್ವತಂತ್ರರವರು ನೀನೆ ಸರ್ವಾತ್ಮನಾಗಿ ಸ್ವೀಕರಿಸುವಾ ಜ್ಞಾನ ನಿನ್ನಾಧೀನ ಕರ್ಮ ನಿನ್ನಾಧೀನ ಅನಾದಿಕಾಲದಿ ಇರುವ ಜೀವರಿಗೆ ನೀನೆ ಸುಖವನೀವೆ ರುದ್ಧಕರ್ಮಗಳಂತೆ ಅನಾದಿಕಾಲದಿ ಜೀವಕರ್ಮ ಜ್ಞಾನ ಅನಾದಿಗಳು ನಿನ್ನಾಧೀನವಯ್ಯ ಅನಾದಿ ಕರ್ಮ ನೀನೆ ಪುರಂದರವಿಠಲ ನೀನೆ ಸಲಹೊ ನಿನ್ನ ಅಡಿ ಪೊಂದಿದವರ ||

Transliteration

Nine kartanu akarta siri ajabavadi indradyamararu Nine svatantra asvatantraravaru nine sarvatmanagi svikarisuva J~jana ninnadhina karma ninnadhina Anadikaladi iruva jivarige nine sukavanive ruddhakarmagalante Anadikaladi jivakarma j~jana anadigalu ninnadhinavayya Anadi karma nine purandaravithala Nine salaho ninna adi pondidavara ||