Haridasa Sahitya — Vyasadasa
Nine anathabandhu
ನೀನೆ ಅನಾಥಬಂಧು
Composer: Purandara Dasaru · Deity: Hari · Genre: Bhakti
Kannada lyrics
ನೀನೆ ಅನಾಥಬಂಧು ಕಾರುಣ್ಯಸಿಂಧು||pa|| ಮದಗಜವೆಲ್ಲ ಕೂಡಿದರೇನು ಅದರ ವ್ಯಾಳ್ಯಕೆ ಒದಗಲಿಲ್ಲ ಮದನನಯ್ಯ ಮಧುಸೂದನ ಎನ್ನಲು ಮುದದಿಂದಲಿ ಬಂದೊದಗಿದೆ ಕೃಷ್ಣಾ||1|| ಪತಿಗಳೈವರಿದ್ದರೇನು ಸತಿಯ ಭಂಗ ಬಿಡಿಸಲಿಲ್ಲ ಗತಿ ನೀನೇ ಮುಕುಂದ ಎನ್ನಲು ಅತಿವೇಗದಿ ಅಕ್ಷಯವಿತ್ತೆ ಕೃಷ್ಣಾ||2|| ಶಿಲೆಯ ರಕ್ಷಿಸಿ ಕುಲಕೆ ತಂದೆ ಬಲಿಗೆ ಒಲಿದು ಪದವಿಯಿತ್ತೆ ಸುಲಭದಿ ಭಕ್ತರ ಸಲುಹುವ ನಮ್ಮ ಚೆಲುವ ಪುರಂದರವಿಟ್ಠಲರಾಯ||3||
Transliteration
Nine anathabandhu karunyasimdhu||pa|| Madagajavella kudidarenu adara vyalyake odagalilla Madananayya madhusudana ennalu Mudadindali bamdodagide krushna||1|| Patigalaivariddarenu satiya Banga bidisalilla Gati nine mukunda ennalu Ativegadi akshayavitte krushna||2|| Sileya rakshisi kulake tamde balige olidu padaviyitte Sulabadi Baktara saluhuva namma Celuva purandaravitthalaraya||3||