Haridasa Sahitya — Vyasadasa

Nimma bagya doddado namma bagya

ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ

Composer: Purandara Dasaru · Deity: Hari · Genre: Bhakti

Kannada lyrics

ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ||pa|| ಸಮ್ಮತಿಂದ ನಾವು ನೀವು ಸಾಟಿ ಮಾಡಿ ನೋಡುವ||a.pa|| ಹೇಮ ಹೊನ್ನು ಹಣಗಳಿಗೆ ಹೇರಳ ಭಯಗಳುಂಟು ರಾಮನಾಮ ದ್ರವ್ಯಕಿನ್ನು ಯಾರ ಭಯವಿಲ್ಲವಯ್ಯ||1|| ಕಡಗ ಕಂಠಮಾಲೆಗಳಿಗೆ ಕಳ್ಳರ ಅಂಜಿಕೆಯುಂಟು ಅಡವಿ ತುಳಸಿಮಾಲೆಗಿನ್ನು ಅರ ಅಂಜಿಕಿಲ್ಲವಯ್ಯ||2|| ವ್ಯಾಪಾರ ಉದ್ಯೋಗಕಿನ್ನು ವ್ಯಾಕುಲದ ಭಯವುಂಟು ಗೋಪಾಳದ ವೃತ್ತಿಗಿನ್ನು ಗೊಡವೆ ಯಾರದಿಲ್ಲವಯ್ಯ||3|| ಸರಕು ಬೆಲ್ಲ ತುಪ್ಪ ಧಾನ್ಯ ಸವೆದೀತೆಂಬ ಚಿಂತೆಯುಂಟು ಹರಿನಾಮಮೃತಕೆ ಇನ್ನು ಯಾವ ಚಿಂತೆಯಿಲ್ಲವಯ್ಯ||4|| ನಿಮ್ಮ ಭಾಗ್ಯ ಲಕ್ಷ್ಮೀದೇವಿ ನಮ್ಮ ಭಾಗ್ಯ ನಾರಾಯಣನು ನಮ್ಮ ನಿಮ್ಮ ಭಾಗ್ಯದೊಡೆಯ ಪುರಂದರವಿಠಲನು||5||

Transliteration

Nimma bagya doddado namma bagya doddado||pa|| Sammatinda navu nivu sati madi noduva||a.pa|| Hema honnu hanagalige herala bayagaluntu Ramanama dravyakinnu yara Bayavillavayya||1|| Kadaga kanthamalegalige kallara anjikeyuntu Adavi tulasimaleginnu ara anjikillavayya||2|| Vyapara udyogakinnu vyakulada bayavuntu Gopalada vruttiginnu godave yaradillavayya||3|| Saraku bella tuppa dhanya saveditemba cinte…