Haridasa Sahitya — Vyasadasa
Nille nille kolhaapuradevi
ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ
Composer: Harapanahalli Bheemavvanavaru · Deity: Lakshmi Devi · Genre: Bhakti
Kannada lyrics
ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ ಇಲ್ಲೆ ಬಾರೆ ಗೆಜ್ಜೆ ಘಿಲ್ಲೆನುತ|| ಕರುಣಸಾಗರ ಹರಿತರುಣಿಯೆ ನೀ ಕೋಟಿ ತರುಣ ಕಿರಣ ರತ್ನಾಭರಣನಿಟ್ಟು ಮಣಿಕೌಂಸ್ತುಭ ವಕ್ಷ ಸ್ಥಳದಲ್ಲಿದ್ದೊ ್ಹಳೆಯುವ ಸುಪರಣವಾಹನಾ ಲಕ್ಷ್ಮಿ ಶರಣು ವಂದಿತಳೆ||1|| ಪಂಕಜಾಕ್ಷಿ ಪಂಕಜೋದ್ಭವನ ಜನನಿ ಪಂಕಜಮುಖಿ ಪಾಲಿಸೆ ಎನ್ನ ಪಂಕಜನಾಭನ ಅಂಕದಲ್ಲೊಪ್ಪುವ ಪಂಕಜೆ ನಿನ್ನ ಪಾದಪಂಕಜಕೆರಗುವೆ ||2|| ಮುಗುಳುನಗೆಯ ಮುತ್ತುಗಳು ಜಡಿತ ಕ- ರ್ಣಗಲ ವಾಲೆಯು ಕದಪಿನಲ್ಲೊ ್ಹಳೆಯೆ ಬಗೆ ಬಗೆ ಸರ ಬಂಗಾರವನಿಟ್ಟು ಮೂ- ರ್ಜಗವ ಮೋಹಿಸೊ ಜಗದಾಧಿಪತಿಯ ರಾಣಿ||3|| ಸಾಗರದೊಳಗ್ಹುಟ್ಟಿ ಆಗ ಶ್ರೀನಾಥನ ಬ್ಯಾಗ ನೋಡಿ ಪರಮೋತ್ಸವದಿ ನಾಗಶಯನ ನಾಗಾರಿವಾಹನನ- ರ್ಧಾಂಗಿ ಎನಿಸಿದಾನಂತ…
Transliteration
Nille nille kolhaapuradevi | ille baare gejje Gillenutaa || pa || Karunaa saagara hari taruniye nee koti taruna kirana Ratnaabharanavittu | Mani koustubha vakshasthaladalholeyuta | Suparnavaahana lakshmi sharana vanditale || 1 || Pankajaakshi pankajodbhava jananee | Pankaja mukhi paalise enna | Pankajanaabhana ankadalloppuva | Pankaje ninna paada pankajakkeraguve || 2 || Mugulu nageya muttugaludur…