Haridasa Sahitya — Vyasadasa

Nerenambi padeyiro hitava

ನೆರೆನಂಬಿ ಪಡೆಯಿರೊ ಹಿತವ

Composer: Vadirajaru · Deity: Sri Madhwacharyaru · Genre: Dasara Pada

Kannada lyrics

ನೆರೆನಂಬಿ ಪಡೆಯಿರೊ ಹಿತವ ನಮ್ಮಗುರು ಮಧ್ವಮುನಿಯ ಸಮ್ಮತವ ||pa|| ತ್ರೇತೆಯೊಳಂಜನೆತನಯನಾಗಿಸೀತಾರಮಣ ರಘುಪತಿಗತಿಪ್ರಿಯದೂತತನದಿ ಖಳತತಿಯ ಕೊಂದುಖ್ಯಾತಿ ಪಡೆದ ಹನುಮಂತನಾದ ಯತಿಯ||1|| ದ್ವಾಪರದಲಿ ಭೀಮನೆನಿಸಿ ಪಾಂಡು-ಭೂಪನರಸಿ ಕುಂತಿ ಉದರದಿ ಜನಿಸಿ ಶ್ರೀಪತಿಗರ್ಥಿಯ ಸಲಿಸಿ ದೈತ್ಯ-ರೂಪ ನೃಪನ ಕೊಂದ ಮುನಿಪನ ಭಜಿಸಿ||2|| ಕಲಿಯುಗದಲಿ ಯತಿಯಾಗಿ ಈಇಳೆಯ ದುಶ್ಶಾಸ್ತ್ರವ ಜರಿದವರಾಗಿಕುಲಗುರು ಮಧ್ವಪತಿಮುನಿಯೋಗಿ ನಮ್ಮಬಲು ಹಯವದನನ ಬಂಟನೆಂದು ಬಾಗಿ||3||

Transliteration

Nerenambi padeyiro hitava nammaguru madhvamuniya sammatava ||pa|| Treteyolanjanetanayanagisitaramana ragupatigatipriyadutatanadi Kalatatiya kondukyati padeda hanumantanada yatiya||1|| Dvaparadali bimanenisi pandu-bupanarasi kunti udaradi janisi Sripatigarthiya salisi daitya-rupa nrupana konda munipana Bajisi||2|| Kaliyugadali yatiyagi I^^ileya dussastrava jaridavaragikulaguru Madhvapatimuniyogi na…