Haridasa Sahitya — Vyasadasa

Nere nambi padeyiro

ನೆರೆನಂಬಿ ಪಡೆಯಿರೋ ಸ್ಥಿರವಾದ ಕರುಣವ

Composer: Keshava Vitthala Dasaru · Deity: Raghavendra Teertharu · Genre: Dasara Pada

Kannada lyrics

ನೆರೆನಂಬಿ ಪಡೆಯಿರೋ – ಸ್ಥಿರವಾದ ಕರುಣವ ಗುರುರಾಘವೇಂದ್ರರಾಯರ ಚಾರುಚರಣವ || ಪ || ವರದಂಷ್ಟ್ರಜಲಸುತ್ಸರಿತ ತೀರದಿ ನಿಂದು ಶರಣರ ದುರಿತವ ತರಿದು ಕಾಯ್ವನೆಂದು || ೧ || ಕರವ ಮುಗಿದು ಬಂದ ಪರಮ ಪಾಮರರಾ ಪೊರೆವ ಕರುಣ ಕೃಪಾಕರಯತಿವರರ || ೨ || ಶ್ರೀಶಕೇಶವವಿಠ್ಠಲೇಶನ ದೂತ ರಾಸೆ ಪೂರೈಸುವ ಗುಣನಿಧಿ ಸತತ || ೩ ||

Transliteration

Nerenambi padeyiro – sthiravada karunava Gururaghavendrarayara carucaranava || pa || Varadamshtrajalasutsarita tiradi nindu Saranara duritava taridu kayvanendu || 1 || Karava mugidu banda parama pamarara Poreva karuna krupakarayativarara || 2 || Srisakesavaviththalesana duta Rase puraisuva gunanidhi satata || 3 ||