Haridasa Sahitya — Vyasadasa
Nemavillada homa innetake
ನೇಮವಿಲ್ಲದ ಹೋಮವೇತಕಯ್ಯ
Composer: Kanakadasaru · Deity: Hari · Genre: Advice
Kannada lyrics
ನೇಮವಿಲ್ಲದ ಹೋಮವೇತಕಯ್ಯ ರಾಮನಾಮವಲ್ಲದೆ ಮತ್ತೆ ನಮಗೊಂದೆ ನೀರ ಮುಳುಗಲೇಕೆ ನಾರಿಯ ಬಿಡಲೇಕೆ ವಾರಕೊಂದುಪವಾಸ ಇರಲೇತಕೆ ನಾರಸಿಂಹನ ದಿವ್ಯನಾಮವನು ನೆನೆದರೆ ಘೋರ ಪಾತಕವೆಲ್ಲ ತೊಲಗಿ ಹೋಗುವುದು ಅಂಬರದೊಳಿರಲೇಕೆ ತಾಂಬೂಲವ ಬಿಡಲೇಕೆ ಡಂಬಕತನದಲಿ ಇರಲೇತಕೆ ಅಂಬುಜನಾಭನನು ಭಾವದಲಿ ನೆನೆದರೆ ಇಂಬುಂಟು ವೈಕುಂಠಪುರದ ಒಳಗಯ್ಯ ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆ ಬೆಂದು ಹೋಗುವುದು ದುರಿತಂಗಳೆಲ್ಲ ಬಂದ ಪಾಪಗಳೆಲ್ಲ ನಿಲ್ಲದೆ ಕಳೆದಾವು ಚಂದಾಗಿ ನೆಲೆಯಾದಿ ಕೇಶವನ ನೆನೆಯೊ
Transliteration
Nemavillada homa innetake ramanamavirada mantraveke ||pa|| Nira mulugalu Eke nariyala bidaleke varakonduupavasa madaleke narasimhana divya namava nenedare ghora patakavella tolagi hoguvudu ||1|| Ambarava toreyaleke tambula bidaleke dambhakada vruttiyali iraletake ambujanabhananu bhavadali nenedare imbuntu vaikumthavemba puradolage ||2|| bandhadolage biddu hariyanu neneyutire bendu hoguvuvu duritan…