Haridasa Sahitya — Vyasadasa
Neenupekshaya maade
ನೀನುಪೇಕ್ಷೆಯ ಮಾಡೆ
Composer: Kanakadasaru · Deity: Hari · Genre: Vairagya
Kannada lyrics
ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ ನಿಗಮಗೋಚರ ಮುಕುಂದ ಗಾನರಸಲೋಲ ಆಗಮಶೀಲ ಭಕ್ತಪರಿಪಾಲ ಗೋಪಾಲ ಬಾಲಲೀಲ ||ಪ|| ಜಪತಪಾನುಷ್ಠಾನ ಜಪಿತನೆಂದೆನಿಸುವರೆ ಜಾಣತನವದರೊಳಗಿಲ್ಲ ಅಪರಿಮಿತಕರ್ಮವನು ಅನುಸರಿಸಿ ನಡೆವುದಕೆ ನಿಪುಣತ್ವ ಮೊದಲೇ ಇಲ್ಲ ಗುಪಿತದಲಿ ದಾನಧರ್ಮವ ಮಾಳ್ಪೆನೆಂದರೆ ಘನವಾದ ಧನವು ಇಲ್ಲ ಚಪಲ ನಿಪುಣತ್ವ ಜಾಣತ್ವವಿಲ್ಲದಿಹ ಸುಪವಿತ್ರ ನೀನೆ ಅಲ್ಲದಿಲ್ಲ ||೧|| ಆನೆ ಮೊಸಳೆಗೆ ಸಿಲ್ಕಿ ಅರೆಬಾಯಿ ಬಿಡುತಿರಲು ಮೌನದಲಿ ಬಂದು ಕಾಯ್ದೆ ಏ ನಾರಣ ಎಂದಡೆ ಅಜಮಿಳಗೆ ಮುಕ್ತಿಯನು ನೀನೊಲಿದು ಕರುಣಿಸಿತ್ತೆ ದಾನವೇಂದ್ರನ ಕೈಯ ಕಡುನೊಂದ ಪ್ರಹ್ಲಾದಗೆ ನೀನೊಲಿದು ಪದವನಿತ್ತೆ ದಾನವಾಂತಕ ದಿವಿಜಮುನಿವಂದಿತನೆ ನೀನು ಎನ್ನನು ಸ…
Transliteration
Ane mosalege silki arebayi bidutiralu maunadali bandu kayde E narayana endade ajamilage muktiyanu ninolidu karunisitte Danavendrana kaiya kadunonda prahladage ninolidu padavanitte Danavantaka divijamunivanditane ninu ennanu salahade baride ||2|| Ishanatrayada bayalaseyali manasotu besaride manadi nondu Hesikeya samsarasagaradolage biddu gasiyade nanindu Aseyanu bidade kadumosadali silukiruva vasil…