Haridasa Sahitya — Vyasadasa

Navagraha sthothra from Thathvasuvvali

ನವಗ್ರಹ ಸ್ತೋತ್ರ ತತ್ವಸುವ್ವಾಲಿ

Composer: Jagannatha Dasaru · Deity: Vishnu · Genre: Dasara Pada

Kannada lyrics

ಶ್ರೀ ಸೂರ್ಯದೇವರ ಸ್ತೋತ್ರ ಆದಿತ್ಯದೇವ ತ್ವತ್ಪಾದಯುಗಳಕೆ ಅಭಿ - ವಾದನವ ಮಾಳ್ಪೆ ಅನುದಿನ । ಅನುದಿನದಿ ಸಜ್ಜನರ ವ್ಯಾಧಿಗಳ ಕಳೆದು ಸುಖವೀಯೋ ॥ 1 ॥ ॥ 6 ॥ ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನು ಸ - ರ್ವಜ್ಞ ನೀನೆಂದು ಸರ್ವತ್ರ । ಸರ್ವತ್ರ ಎನಗೆ ಬ್ರ - ಹ್ಮಜ್ಞಾನ ಭಕುತಿ ಕರುಣಿಸೋ ॥ 2 ॥ ॥ 7 ॥ ಸೂರಿಗಮ್ಯನೆ ವಾಕ್‍ ಶರೀರ ಬುದ್ಧಿಜವಾದ - ಪಾರದೋಷಗಳ ಎಣಿಸದೆ । ಎಣಿಸದೆ ಭಗವಂತ - ನಾರಾಧನೆಯನಿತ್ತು ಕರುಣಿಸೊ ॥ 3 ॥ ॥ 8 ॥ ಶ್ರೀ ಚಂದ್ರದೇವರ ಸ್ತೋತ್ರ ರೋಹಿಣೀರಮಣ ಮದ್ದೇಹಗೇಹಾದಿಗಳ ಮೋಹ ಪರಿಹರಿಸಿ ಮನದಲ್ಲಿ । ಮನದಲ್ಲೆನಗೆ ಗರುಡ - ವಾಹನನ ಸ್ಮರಣೆಯನು ಕರುಣಿಸೋ ॥ 4 ॥ ॥ 9 ॥ ಕ್ಷೀರಾಬ್ಧಿಜಾತ ಮಾರಾರಿ ಮಸ್ತಕಸದನ ವ…

Transliteration

Sri soorya stuti Aadityadeva twatpaadayugalake abhivandaneya maalpe anudina | Anudinadi sajjanara vyaadhigala kaledu sukhaveeyo || Soorigamyane vaak shareera buddhijavaadapaaradoshagala enisade | Enisade bhagavantanaaraadhaneyanittu karuniso || Sri Chandra stuti rohini ramana maddehagehaadigala moha pariharisi manadalli | Manadalli garudavaahanana smaraneyanu karuniso || 1 || Dattadoorvaasaanujaat…