Haridasa Sahitya — Vyasadasa
Narayana ninna namada
ನಾರಾಯಣ ನಿನ್ನ ನಾಮದ
Composer: Purandara Dasaru · Deity: Hari · Genre: Bhakti
Kannada lyrics
ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ನಾಲಿಗೆಗೆ ಬರಲಿ ||ಪ || ಕೂಡುವಾಗಲಿ ನಿಂತಾಡುವಾಗಲಿ ಮತ್ತೆ ಹಾಡುವಾಗಲಿ ಹರಿದಾಡುವಾಗಲಿ ಕೋಟಿ ವಿನೋದದಿ ನೋಡದೆ ನಾ ಮಾಡಿದ ಪಾಪ ಬಿಟ್ಟೋಡಿ ಹೋಗೋ ಹಾಗೆ ||೧|| ಊರಿಗೆ ಹೋಗಲಿ ಊರೊಳಗಿರಲಿ ಕಾರಣಾರ್ಥಂಗಳೆಲ್ಲ ಕಾದಿರಲಿ ವಾರಿಜನಾಭ ನರಸಾರಥಿ ಸನ್ನುತ ಸಾರಿಸಾರಿಗೆ ನಾ ಬೀಸರದ್ಹಾಂಗೆ ||೨|| ಹಸಿದಿದ್ದಾಗಲಿ ಹಸಿವಿಲ್ಲದಾಗಲಿ ಕಸವಿಸಿಯಿರಲಿ ಹರುಷಿರಲಿ ವಸುದೇವಾತ್ಮಕ ಶಿಶುಪಾಲಕ್ಷಯ ಅಸುರಾಂತಕ ನಿನ್ನ ಹೆಸರು ಮರೆಯದ್ಹಾಂಗೆ ||೩|| ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ ಎಷ್ಟಾದರೂ ಮತಿಗೆಟ್ಟಿರಲಿ ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ ಅಷ್ಟಾಕ್ಷರ ಮಹಾಮಂತ್ರದ ನಾಮವ ||೪|| ಕನಸಿ…
Transliteration
Narayana ninna namada smaraneya Saramrutavenna naligege barali ||pa || Kuduvagali nintaduvagali matte Haduvagali haridaduvagali Koti vinodadi nodade na Madida papa bittodi hogo hage ||1|| Urige hogali urolagirali Karanarthangalella kadirali Varijanaba narasarathi sannuta Sarisarige na bisarad~hamge ||2|| Hasididdagali hasivilladagali Kasavisiyirali harushirali Vasudevatmaka sisupalakshaya Asuranta…