Haridasa Sahitya — Vyasadasa

Naravrunda embo kananadalli sri-

ನರವೃಂದ ಎಂಬೊ ಕಾನನದಲ್ಲಿ ಶ್ರೀ-

Composer: Purandara Dasaru · Deity: Hari · Genre: Ugabhoga

Kannada lyrics

ನರವೃಂದ ಎಂಬೊ ಕಾನನದಲ್ಲಿ ಶ್ರೀ- ಹರಿನಾಮವೆಂಬಂಥ ಕಲ್ಪವೃಕ್ಷ ಹುಟ್ಟಿತಯ್ಯ ನೆರಳು ಸೇರಲುಂಟು ಫಲವು ಮೆಲ್ಲಲುಂಟು ನಾಲಿಗೆಯಲಿ ನಾಮತ್ರಯಂಗಳುಂಟು ಇದೇ ಮನುಜರ ಮನದ ಕೊನೆಯ ಠಾವು ಇದು ಬ್ರಹ್ಮಾದಿಗಳ ಸದಮಲ ಹೃದಯ ಪೀಠ ಇದೇ ದ್ವಾರಕೆ ಇದೇ ಕ್ಷೀರಾಂಬುಧಿ ಇದೇ ಪುರಂದರವಿಠಲನ ಮಂದಿರ ||

Transliteration

Naravrunda embo kananadalli sri- Harinamavembantha kalpavruksha huttitayya Neralu seraluntu Palavu mellaluntu Naligeyali namatrayangaluntu Ide manujara manada koneya thavu Idu brahmadigala sadamala hrudaya pitha Ide dvarake ide kshirambudhi Ide purandaravithalana mandira ||