Haridasa Sahitya — Vyasadasa
Narasimhana paada
ನರಸಿಂಹನ ಪಾದ
Composer: Purandara Dasaru · Deity: Narasimha · Genre: Bhakti
Kannada lyrics
ನರಸಿಂಹನ ಪಾದ ಭಜನೆಯ ಮಾಡೋ ||ಪ || ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ.ಪ|| ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ ವರ ಕಂಭದಿಂ ಬಂದ ಸಿರಿ ನರಹರಿ ನಮ್ಮ ||೧|| ತರಳನ ಮೊರೆ ಕೇಳಿ ತ್ವರಿತದಲಿ ಬಂದು ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ ||೨|| ಹರಿ ವಿರಿಂಚಾರಾದ್ಯರು ಕರವೆತ್ತಿ ಮುಗಿಯಲು ಪರಮ ಶಾಂತನಾದ ಪುರಂದರವಿಠಲ ||೩||
Transliteration
Narasimhana paada bhajaneya maadalu Duritha parvathava khandi suva kulisadanthe|| Tharalana morekeli thvaritha dindali bandu Durulana karula thanna koralalli dharisida||1|| Suralella nadugalu siridevi moreyide! Varakambha dindabanda sirinarahari namma||2|| Hara virinchyadaru karavetthi mugiyalu Paramasaanthanaada sree purandara vitala ||3||