Haridasa Sahitya — Vyasadasa
Narasimha vajra
ನರಸಿಂಹ ವಜ್ರ
Composer: Vijaya Dasaru · Deity: Narasimha · Genre: Bhakti
Kannada lyrics
ನರಸಿಂಹ ವಜ್ರ ಸಿಂಹ ಸರಸಿಜನಾಭಾ ದಕ್ಷಿಣ ಶರಧಿನಿವಾಸಾ ||pa|| ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು ಪರಿಯ ದೈವವೆ ಮೊರೆಯೋಗಲೂ ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ||1|| ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ ಪುಟ್ಟಿತಿರೆ ಪಗಲಿರಳು ಒಂದೆಂದರು ಸಕಲರೂ ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ ||2|| ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ ಕಕ್ಕಸದ ದೈವ ಅನಂತ ಪದುಮನಾಭ ಮುಕ್ತಿದಾಯಕ ವಿಜಯವಿಠ್ಠಲ ಮಹದಾ3
Transliteration
Narasimha vajrasimha |sarisijanaba rakshana | Saradhi nivasa || pallavi || Hiranya kasipu ta prahladana badhisalu | Piriya daivave moreyogalu | Hiridagi keli hitadali bandu bobbidalu | Hiranyagarbadigalu hiridu chintisalu || 1 || Bugilene dikkinalli prati Sabda puttutire | Pagaliralu ondendaru sakalaru | Jagajagipa belagu kavidadu muru lokakke | Uguru kone pogali vedagalu beragage || 2 || Rakkasa…