Haridasa Sahitya — Vyasadasa
Narasimha pahi lakshmi
ನರಸಿಂಹ ಪಾಹಿ ಲಕ್ಷ್ಮೀ
Composer: Jagannatha Dasaru · Deity: Vishnu · Genre: Dasara Pada
Kannada lyrics
ನರಸಿಂಹ ಪಾಹಿ ಲಕ್ಷ್ಮೀ ನರಸಿಂಹ||pa|| ನರಸಿಂಹ ನಮಿಪೆ ನಾ ನಿನ್ನ ಚಾರುಚರಣಕಮಲಕೆ ನೀ ಎನ್ನ ಕರವ ಪಿಡಿದು ನಿಜ ಶರಣನೆಂದೆನಿಸೊ ಭಾ ಸುರ ಕರಣಾಂಬುಧೆ ಗರುಡವಾಹನ ಲಕ್ಷ್ಮೀ ||a.pa|| ತರಳ ಪ್ರಹ್ಲಾದನ್ನ ನುಡಿಯಾ ಕೇಳಿ ತ್ವರಿತದಿ ಬಂದ್ಯೊ ಎನ್ನೊಡೆಯ ನಾನು ಕರುಣಾಳೊ ಭಕ್ತರ ಭಿಡೆಯ ಮೀರ ಲರಿಯೆ ಎಂದೆಂದು ಕೆಂಗಿಡಿಯ ಅಹ ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿಕ ರ್ಬುರ ಕಶ್ಯಪುವಿನ ಹಿಂಗುರುಳ ಪಿಡಿದೆ ಲಕ್ಷ್ಮೀ ||1|| ಪ್ರಳಯಾಂಬುನಿಧಿ ಘನಘೋಷದಂತೆ ಘುಳಿ ಘುಳಿಸುತಲಿ ಪ್ರದೋಷ ಕಾಲ ತಿಳಿದು ದೈತ್ಯನ ಅತಿರೋಷದಿಂದ ಪ್ಪಳಿಸಿ ಮೇದಿನಿಗೆ ನಿದೋಷ ಅಹ ಸೆಳೆಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್…
Transliteration
Narasimha pahi lakshmi narasimha | pa | Narasimha namipe na ninna | charu charanakamalake ni enna | Karava pididu nija sarananendenisu | Basura karunambudhe garudavahana – lakshmi | a | Tarala prahladana nudiya keli | Tvaritadi bandyo ennodeya nanu Karunalo Baktara bideya miralariye| Endendu kengidiya aha- Baradinduguluta bobbirudi bembatti Karburakasyapuvina hingarula pidida lakshmi | 1 | Pralaya…