Haridasa Sahitya — Vyasadasa

Narasimha mantravu

ನರಸಿಂಹ ಮಂತ್ರವೊಂದಿರಲು

Composer: Purandara Dasaru · Deity: Narasimha · Genre: Bhakti

Kannada lyrics

ನರಸಿಂಹ ಮಂತ್ರವೊಂದಿರಲು ಸಾಕು ದುರಿತ ಕೋಟಿಯ ತರಿದು ಭಾಗ್ಯವನು ಕೊಡುವ ಶಿಶುವಾದ ಪ್ರಹ್ಲಾದನ ಬಾಧೆ ಬಿಡಿಸಿದ ಮಂತ್ರ ಅಸುರ ಕುಲದವರಿಗೆ ಶತ್ರು ಮಂತ್ರ ವಸುಧೆಯೊಳು ಪಾದಕಿಗಳಘವ ಹೀರುವ ಮಂತ್ರ ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ ದಿಟ್ಟ ಧ್ರುವರಾಯನಿಗೆ ಪಟ್ಟಗಟ್ಟಿದ ಮಂತ್ರ ಶಿಷ್ಟ ವಿಭೀಷಣನ ಪೊರೆದ ಮಂತ್ರ ಕಟ್ಟ ಕಡೆಯಲಿ ಅಜಾಮಿಳನ ಸಲಹಿದ ಮಂತ್ರ ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ ಕೊಂಡಾಡೊ ಲೋಕಕೆ ಪ್ರಚಂಡ ಮಂತ್ರ ಗಂಡುಗಲಿ ಕದನ ಉದ್ದಂಡ ವಿಕ್ರಮ ಮಂತ್ರ ಪುಂಡರೀಕಾಕ್ಷ ಪುರಂದರವಿಠಲ ಮಂತ್ರ

Transliteration

Narasimha mantravu ondiralu saku Durita kotiya taridu bagyavannu koduva || (pa)|| Sisuvada pralhadana badhe bidisida mantra Asurakuladavarige Satru mantra Vasudheyolu patakigalagava hiruva mantra Pasupatige priyavada divya mantra (1) Ditta dhruvarayage pattagattida mantra Sishta vibishanana poreda mantra Katta kadeyali ajamilana salahida mantra Mutti Bajisidavarige moksha mantra (2) Hindubutana ka…