Haridasa Sahitya — Vyasadasa
Nanu ninu endu ommegadaru nara
ನಾನು ನೀನು ಎಂದು ಒಮ್ಮೆಗಾದರು ನರ
Composer: Vijaya Dasaru · Deity: Hari · Genre: Ugabhoga
Kannada lyrics
ನಾನು ನೀನು ಎಂದು ಒಮ್ಮೆಗಾದರು ನರ ಅನಂತ ಜನುಮದಲ್ಲಿ ನುಡಿದನಾಗೆ ಶ್ವಾನ ಸೂಕರ ದುರ್ಯೋನಿಯಲ್ಲಿ ಪುಟ್ಟಿ ಮಾನಸಾಧಮನಾಗಿ ಕಟ್ಟಕಡಿಗೆ ನಾನಾ ಸಂಕಟ ಬಿಟ್ಟು ಹೀನ ಭೋಜನ ಮಾಡಿ ತಾನಿಳಿವನು ನಿತ್ಯ ನರಕದಲ್ಲಿ ಅನಂತ ಜನುಮದೊಳು ಸೇವಕನೆಂದೆನೆ ತಾನೊಲಿದು ಈವ ವಿಜಯವಿಠಲ ಗತಿ||
Transliteration
Nanu ninu endu ommegadaru nara Ananta janumadali nudidanage Svanasukaraduryoniyalli putti Manushadhamanagi kattakadege Nana sankatapattu hina bojana madi Tanilivanu nityanarakadalli Ananta janumadolu sevakanendene Tanolidu Iva vijayavithala gati |