Haridasa Sahitya — Vyasadasa
Nanninda nane janisi bandene deva
ನನ್ನಿಂದ ನಾನೇ ಜನಿಸಿ ಬಂದೆನೆ ದೇವ
Composer: Kanakadasaru · Deity: Hari · Genre: Philosophy
Kannada lyrics
ನನ್ನಿಂದ ನಾನೇ ಜನಿಸಿ ಬಂದೆನೆ ದೇವ ಎನ್ನ ಸ್ವತಂತ್ರವು ಲೇಶವಿದ್ದರು ತೋರು ||pa|| ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆನಿನ್ನದು ತಪ್ಪೋ ನನ್ನದು ತಪ್ಪೋ ಪರಮಾತ್ಮ||a.pa|| ಜನನಿಯ ಜಠರದಲಿ ನವಮಾಸ ಪರಿಯಂತಘನದಿ ನೀ ಪೋಷಿಸುತಿರೆ, ನಾನು| ಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದವನಜಾಕ್ಷ ನೂಕಿದವನು ನೀನಲ್ಲವೆ ||1|| ಎಲವುಗಳ ಜಂತೆ ಮಾಡಿ ನರಗಳ ಹುರಿಯಿಂಹೊಲಿದು ಚರ್ಮವ ಹೊದಿಸಿ ದೇಹದೊಳು| ಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿನೆಲಸಿ ಚೇತನವನಿತ್ತವ ನೀನಲ್ಲವೆ ||2|| ಜನಿಸಿದಾರಭ್ಯದಿಂದ ಇಂದಿನ ಪರಿಯಂತಘನಘನ ಪಾಪ ಸುಕರ್ಮಂಗಳನು| ಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲಅನುಭವಿಸುವುದು ಜೀವನೊ ನೀನೊ ದೇವ ||3||…
Transliteration
Nanninda nane janisi bandene deva Enna svatantravu lesaviddaru toru ||pa|| Ninna preraneyinda nadedu nudida mele Ninnadu tappo ennadu tappo paramatma ||a.pa|| Jananiya jatharadi navamasa pariyanta Ganadi ni poshisutire nanu Janisalarenu ene janisendikkaladinde Vanajaksha nukidavanu ninallave deva ||1|| Andhakana kaiyali kolittu karedoyva Mundalu tappi gundige kedahalu Andhakanadu tappo mundalina t…