Haridasa Sahitya — Vyasadasa

Naneke badavanu

ನನೇಕೇ ಬದವನು ನನೇಕೇ ಪರದೇಸಿ

Composer: Purandara Dasaru · Deity: Hari · Genre: Philosophy

Kannada lyrics

ನಾನೇಕೆ ಬಡವನು ನಾನೇಕೆ ಪರದೇಶಿ ಶ್ರೀನಿಧಿ ಹರಿ ಎನಗೆ ನೀನಿರುವ ತನಕ ||ಪ.|| ಹುಟ್ಟಿಸಿದ ತಾಯ್ತಂದೆ ಇಷ್ಟಮಿತ್ರರು ನೀನೆ ಅಷ್ಟಬಂಧುವು ಸರ್ವ ಬಳಗ ನೀನೆ ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ ಶ್ರೇಷ್ಠ ಮೂರುತಿ ಕೃಷ್ಣ ನೀನಿರುವ ತನಕ ||೧|| ಒದಹುಟ್ಟಿದವ ನೀನೆ ಒಡಲಿಗ್ಹಾಕುವ ನೀನೆ ಉಡಲು ಹೊದೆಯಲು ವಸ್ತ್ರ ಕೊಡುವವನು ನೀನೆ ಮಡಾದಿ ಮಕ್ಕಳನೆಲ್ಲ ಕಡೆಹಾಯ್ಸುವವ ನೀನೆ ಬಿಡದೆ ಸಲಹುವ ಒಡೆಯ ನೀನಿರುವ ತನಕ ||೨|| ವಿದ್ಯೆ ಕಲಿಸುವ ನೀನೆ ಬುದ್ಧಿ ಹೇಳುವ ನೀನೆ ಉದ್ಧಾರಕರ್ತ ಮಮ ಸ್ವಾಮಿ ನೀನೆ ಮುದ್ದು ಶ್ರೀ ಪುರಂದರ ವಿಠಲಾ ನಿನ್ನಡಿ ಮ್ಯಾಲೆ ಬಿದ್ದುಕೊಂಡಿರುವ ಎನಗೇತರ ಭಯವು ||೩||

Transliteration

Naneke badavanu naneke paradesi Shrinidhe hari enage niniruva tanaka|| Puttisida tai tande ishta mitranu nine Asta bandhuvu sarva balaga nine pettigeyolagina ashtabharana nine Shrestha muruti Krishna niniruva tanaka naneke||1|| Oda huttidava nine odalighakuva nine Udalu hodiyalu vastra koduvavanu nine madadi makkalanella kadehayisuva nine Bidade salahuva odeya niniruva tanaka naneke||2|| Vidye hel…