Haridasa Sahitya — Vyasadasa

Nane Bramisideno vishayadi

ನಾನೆ ಭ್ರಮಿಸಿದೆನೊ ವಿಷಯದಿ,

Composer: Gopala Dasaru · Deity: Hari · Genre: Philosophy

Kannada lyrics

ನಾನೆ ಭ್ರಮಿಸಿದೆನೊ ವಿಷಯದಿ, ಮಮತೆ ನೀನೆ ಸೃಜಿಸಿದೆಯೊ || ಪ. || ಅನಾದಿ ನಿಧಾನ ನೀನೆ ತಿಳಿದು ನೋಡೊ || ಅ.ಪ. || ಕೇವಲಾನಂದ ಚಿನ್ಮಯರೂಪ ನೈಜಸ್ವಭಾವ ತ್ಯಜಿಸಿ ಅನ್ಯ-ಭಾವವಾಶ್ರಯಿಸಲು ಶ್ರೀವರ ನಿನ್ನ ಬಂಧಕಶಕುತಿ ಆವರಿಸೆನ್ನ ಕಾವಗೊಳಿಸಿ ಈ ವಿಧ ಬನ್ನ ಬಡಿಸುತಿದೆ ಕೈವಲ್ಯದರಸನೆ ನೀ ವಿಚಾರಿಸಿ ಕಾಯೊ || 1 || ಸ್ವತಂತ್ರ ನೀನು ಅಸ್ವತಂತ್ರ ನಾನು ದೂತನ್ನ ಈ ತೆರಕಾತುರಗೊಳಿಪುದು ಏತರಘನವೊ ಇದರಿಂದಖ್ಯಾತೇನುಫಲವೊ ಎನ್ನೊಳು ನಿನಗೇತಕೀ ಛಲವೊ ಭವದಿ ಕೈ-ಸೋತು ಬಿನ್ನೈಸುವೆ ಮಾತುಮನ್ನಿಸಿ ಕಾಯೊ || 2 || ಕಕ್ಕಸ ಭವದೊಳು ಠಕ್ಕಿಸಿ ಸಿಗಹಾಕಿ ಸಿಕ್ಕುಬಿಡಿಸದೆ ನೀ-ನಕ್ಕು ಸುಮ್ಮನಿರಲು ದಿಕ್ಕ್ಯಾರೊ ಎನಗೆ ದಣಿದು ಮೊರೆ-ಯಿಕ್ಕ…

Transliteration

Anadi nidhana nine tilidu nodo || a.pa. || Kevalananda cinmayarupa naijasvabava tyajisi Anya-bavavasrayisalu srivara ninna bandhakasakuti Avarisenna kavagolisi I vidha banna badisutide Kaivalyadarasane ni vicarisi kayo || 1 || Svatantra ninu asvatantra nanu Dutanna I terakaturagolipudu etaraganavo Idarindakyatenupalavo ennolu ninagetaki Calavo Bavadi kai-sotu binnaisuve matumannisi kayo || 2 || Ka…