Haridasa Sahitya — Vyasadasa
Nanda tanaya govindana
ನಂದ ತನಯ ಗೋವಿಂದನ
Composer: Purandara Dasaru · Deity: Hari · Genre: Philosophy
Kannada lyrics
ನಂದ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ ||ಪ|| ಬಂಧಗಳನು ಭವ ರೋಗಗಳೆಲ್ಲನು ನಿಂದಿಪುದು ಈ ಮಿಠಾಯಿ ||ಅ.ಪ|| ದಧಿ ಘೃತ ಕ್ಷೀರಂಗಳಿಗಿಂತಲೂ ಬಹು ಅಧಿಕವಾದ ಮಿಠಾಯಿ ಕದಳೀ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದು ಈ ಮಿಠಾಯಿ ||೧|| ಪಂಚ ಭಕ್ಷ್ಯಂಗಳ ಷಡ್ರಸಾನ್ನಗಳ ಮಿಂಚಿದಂಥ ಮಿಠಾಯಿ ಕಂಚೀಶನೆ ರಕ್ಷಿಸು ಎಂದುಸಿರುವರ ಅಂಜಿಕೆ ಬಿಡಿಪ ಮಿಠಾಯಿ ||೨|| ಜಪ ತಪ ಸಾಧನಗಳಿಗಿಂತಲೂ ಬಹು ಅಪರೂಪದ ಮಿಠಾಯಿ ಜಿಪುಣ ಮತಿಗಳಿಗೆ ಸಧ್ಯವಲ್ಲದಿಹ ಪುರಂದರ ವಿಠಲ ಮಿಠಾಯಿ ||೩||
Transliteration
Nanda tanaya govindana Bajipudu anandavada mithayi ||pa|| Bandhagalanu Bava rogagalellanu nindipudu I mithayi ||a.pa|| Dadhi gruta kshirangaligimtalu bahu adhikavada mithayi Kadali drakshi karjura rasagalanu miruvudu I mithayi ||1|| Pancha bakshyamgala shadrasannagala mimcidantha mithayi Kancisane rakshisu emdusiruvara anjike bidipa mithayi ||2|| Japa tapa sadhanagaligimtalu bahu aparupada mithayi…