Haridasa Sahitya — Vyasadasa
Nammama sharade
ನಮ್ಮಮ್ಮ ಶಾರದೆ
Composer: Kanakadasaru · Deity: Ganesha · Genre: Bhakti
Kannada lyrics
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿನಿಮ್ಮೊಳಗಿಹನ್ಯಾರಮ್ಮ ||pa|| ಕಮ್ಮಗೋಲನ ವೈರಿಸುತನಾದ ಸೊಂಡಿಲಹೆಮ್ಮೈಯ್ಯ ಗಣನಾಥನೆ ಅಮ್ಮಯ್ಯ ||a.pa|| ಮೋರೆ ಕಪ್ಪಿನ ಭಾವ ಮೊರದಗಲ ಕಿವಿಯುಳ್ಳಕೋರೆ ದಾಡೆಯವನ್ಯಾರಮ್ಮ ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನಧೀರ ತಾ ಗಣನಾಥನೆ ಅಮ್ಮಯ್ಯ ||1|| ಉಟ್ಟ ದಟ್ಟಿಯು ಮತ್ತೆ ಬಿಗಿದುಟ್ಟ ಚಲ್ಲಣದದಿಟ್ಟ ತಾನಿವನ್ಯಾರಮ್ಮ ಪಟ್ಟದ ರಾಣಿ ಪಾರ್ವತಿಯ ಕುಮಾರಹೊಟ್ಟೆಯ ಗಣನಾಥನೆ ಅಮ್ಮಯ್ಯ||2|| ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲಭಾಷಿಗನಿವನ್ಯಾರಮ್ಮ ಲೇಸಾಗಿ ಸುಜನರ ಸಲಹುವ ನೆಲೆಯಾದಿಕೇಶವನ ದಾಸ ಕಾಣೆ ಅಮ್ಮಯ್ಯ ||3||
Transliteration
Nammamma sharade uma maheshwari Nimmolagihanaramma || Kammagolana vairi sutanada sondila Hemmeya gananathane || More kappina bhava moradagalada kivi Kore dadeya naramma Murukannana suta muriditta chandrana Dhira ta gananathane ammayya ||1|| Utta tattiya bigidutta chellanada Ditta tanivanaramma Pattada rani parvatiya kumaranu Hotteya gananathane ammayya ||2|| Raashi vidyeya balla ramani hambalanoll…