Haridasa Sahitya — Vyasadasa

Nambide ninna pada narasimha

ನಂಬಿದೆ ನಿನ್ನ ಪಾದ ನರಸಿಂಹ

Composer: Purandara Dasaru · Deity: Narasimha · Genre: Bhakti

Kannada lyrics

ನಂಬಿದೆ ನಿನ್ನ ಪಾದ ನರಸಿಂಹ ಎನ್ನ ಬೆಂಬಿಡದೆ ಸಲಹಯ್ಯ ನರಸಿಂಹ ।।೧।। ಹಂಬಲಿಸುವೆನು ಬಲು ನರಸಿಂಹ ಪಾದ ನಂಬಿದವರನು ಕಾಯೋ ನರಸಿಂಹ ।।೨।। ತುಂಬುರು ನಾರದಪ್ರಿಯ ನರಸಿಂಹ ಚೆಲ್ವ ಶಂಬರಾರಿಯ ಪಿತನೆ ನರಸಿಂಹ ।।೩।। ಅಂಬರೀಷನ ಕಾಯ್ದ ನರಸಿಂಹ ಜಗದಂಬಾರಮಣನೆ ಸಿರಿ ನರಸಿಂಹ ।।೪।। ಬಾಲ ಕರೆದಲ್ಲಿ ಬಂದೆ ನರಸಿಂಹ ಭಕ್ತಪಾಲಿಪ ದಯಾಳು ಸಿರಿ ನರಸಿಂಹ ।।೫।। ಲೀಲೆಯಿಂದ ಹಿರಣ್ಯನ ನರಸಿಂಹ ಕೊಂದ ಲೋಲ ಸಿರಿಯರಸನೆ ನರಸಿಂಹ ।।೬।। ಅಚ್ಯುತಾನಂತ ಗೋವಿಂದ ನರಸಿಂಹ ಸಿರಿಸಚ್ಚಿದಾನಂದ ಮುಕುಂದ ನರಸಿಂಹ ।।೭।। ಕಿಚ್ಚಿನಂದದಿ ಬಂದೆ ನರಸಿಂಹ ಭವ ವಿಚ್ಚೆಯಿಂದ ಬಿಡಿಸಯ್ಯ ನರಸಿಂಹ ।।೮।। ಕರಿಮೊರೆಯನು ಕೇಳಿ ನರಸಿಂಹ ಬಲು ಬರದಿಂದೊದಗಿ ಬಂದೆ…

Transliteration

Nambide ninna pada narasimha | Enna bembidade salahayya narasimha || Hambalisuvenu balu narasimha | Pada nambidavaranu kayo narasimha || Tumburu naradapriya narasimha | Celva sambarariya pitane narasimha || Ambarisana kayda narasimha | Jagadambaramanane siri narasimha || Bala karedalli bande narasimha | Baktapalipa dayalu siri narasimha || Lileyinda hiranyana narasimha | Konda lola siriyarasane na…