Haridasa Sahitya — Vyasadasa

Nambide ninna paada guru mukhyapraana

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ

Composer: Vijaya Dasaru · Deity: Mukhyaprana / Vaayu / Hanuma / Bheema · Genre: Dasara Pada

Kannada lyrics

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ ||ನಂಬಿದೆ || ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ ||ನಂಬಿದೆ ನಿನ್ನ|| ದಿಂಭದೊಳಗೆ ಹರಿಯ ಬಿಂಬ ಪೊಳೆ ವಂತೆ ಮಾಡೋ ||ನಂಬಿದೆ || ಅಂತರಂಗದ ಉಸುರ ಹೊರಗೆ ನೂಕಿ ಅಂತರಂಗಕ್ಕೆ ಸೇರುವ ||ಅಂತರಂಗ|| ಪಂತದಾಳು ನೀನೇ ಕಂತು ಜನಕನಲ್ಲಿ ||ಪಂತದಾಳು|| ಮಂತ್ರೀಯೆನಿಸಿ ಸರ್ವಾಂತರ್ಯಾಮಿಯಾಗಿ ನಿಂತು ನಾನಾ ಬಗೆ ತಂತು ನಡೆಸುವ ಹಂತಕಾರಿ ಗುಣವಂತ ಬಲಾಢ್ಯ ||ನಂಬಿದೆ|| ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿಮ ಹಂಸ ಮಂತರ ||ಇಪತ್ತು|| ತಪ್ಪದೆ ದಿನ ದಿನ ಒಪ್ಪದಿಂದಲಿ ಜಪಿಸಿ ||೨|| ತಪ್ಪಿಸಿ ಭವದ ಸಮೀಪದ ಜೀವರಿಗೆ ಅಪ್ಪನಂದದಿ ಪುಣ್ಯ ಬಪ್ಪಂತೆ ಕರುಣಿಸೋ ಕಪ್ಪು ವರ್ಣನ ಕೂಡೊಪ್ಪಿಸಿ…

Transliteration

Nambide ninna paada guru mukhyapraana || pa || Nambide ninna paada dambhava tolagisi | Dimbhadolage hariya bimba polevamte maado || a. Pa. || Ippattu omdu saavira aidondunooru | Apratima hamsa mantara | Tappade dina dina oppuvandadi japisi | Tappiso bhavava sameepada jeevake | Appanandadi punya bappante karuniso | Kappu varnana kooda oppisi paaliso || 1 || Hattelu eradaayitu naadiyolu | Sutti sutt…