Haridasa Sahitya — Vyasadasa
Nambide na ninna charana kamalavannu
ನಂಬಿದೆ ನಾ ನಿನ್ನ ಚರಣಕಮಲವನ್ನು ವಿಜಯರಾಯ
Composer: Haridasa · Deity: Vijaya Dasaru · Genre: Dasara Pada
Kannada lyrics
ನಂಬಿದೆ ನಾ ನಿನ್ನ ಚರಣಕಮಲವನ್ನು ವಿಜಯರಾಯ ||pa|| ಬೆಂಬಿಡದೆಲೆ ವಿಷಯ ಹಂಬಲ ಬಿಡಿಸಯ್ಯ ವಿಜಯರಾಯ ||a.pa|| ತಾಯಿ ಎಳೆಯ ಶಿಶುವನು ಬಿಟ್ಟಿರುವುದುಂಟೆ ವಿಜಯರಾಯಬಾಯ ಬಿಡುವೆ ನಾ ಭವದಲ್ಲಿ ಸಿಗಬಿದ್ದು ವಿಜಯರಾಯನೋಯಲಾರೆನೂ ಎನ್ನ ಕಾಯೊ ಕರುಣದಿಂದ ವಿಜಯರಾಯಕಾಯ ಮನವು ನಿನ್ನ ಚರಣಕ್ಕೊಪ್ಪಿಸಿದೆನೊ ವಿಜಯರಾಯ ||1|| ಎತ್ತಗಾಣದೆ ಕರ್ಮ ಕತ್ತಲೆಯೊಳು ಸುತ್ತಿ ವಿಜಯರಾಯ ತತ್ತಳಗೊಳುತಿಪ್ಪೆ ಎತ್ತಿರೊ ಎನ್ನ ವಿಜಯರಾಯಪೆತ್ತ ತಂದೆಗೆ ಮಗ ಭಾರವಾಗುವುದುಂಟೆ ವಿಜಯರಾಯವಿತ್ತ ಭಾಗ್ಯವನೊಲ್ಲೆ ಎಂದೆಂದಿಗೂ ನಾನು ವಿಜಯರಾಯ ||2|| ತುಂಬಿದ ಭಂಡಾರ ಸಂಪತ್ತು ಎನಗೆಂದು ವಿಜಯರಾಯಹಂಬಲಿಸುತ ಬಲು ಸಂಭ್ರಮದಿರುತಿಪ್ಪೆ ವಿಜಯರಾಯಸಂಬಳಕಾರ ಶಿಷ…
Transliteration
naMbide nA ninna caraNakamalavannu vijayarAya ||pa|| beMbiDadele viShaya haMbala biDisayya vijayarAya ||a.pa|| tAyi eLeya SiSuvanu biTTiruvuduMTe vijayarAyabAya biDuve nA Bavadalli sigabiddu vijayarAyanOyalArenU enna kAyo karuNadinda vijayarAyakAya manavu ninna caraNakkoppisideno vijayarAya ||1|| ettagANade karma kattaleyoLu sutti vijayarAya tattaLagoLutippe ettiro enna vijayarAyapetta tandege mag…