Haridasa Sahitya — Vyasadasa
Nambi tutisiro Raghavendra
ನಂಬಿ ತುತಿಸಿರೋ ರಾಘವೇಂದ್ರ
Composer: Jagannatha Dasaru · Deity: Raghavendra Teertharu · Genre: Dasara Pada
Kannada lyrics
ನಂಬಿ ತುತಿಸಿರೋ ರಾಘವೇಂದ್ರ ಧೊರೆಯ ಸನ್ಮುನಿ ಕುಲವರ್ಯ || ಪ || ಅಂಬುಜನಾಭನಿಗತಿ ಪ್ರೀಯ ಸಜ್ಜನರಿಗೆ ಸಹಾಯ್ಯ || ಅ || ಕನಕಶಯ್ಯನಾ ತನುಜನಾಗಿ ಜನಿಸಿ – ನರಹರಿಅಯನು ಒಲಿಸಿ ಅನುಜರಿಗನುದಿನ ತತ್ತ್ವವ ತಾ ಕಲಿಸಿ ಪರಮತವನ್ನು ಜಯಿಸಿ ಮನದಲಿ ಶ್ರೀ ಹರಿ ಪದವನ್ನೇ ಭಜಿಸಿ ವರಕರುಣವ ಸಲಿಸಿ ವನಜಭವಾಂಡದಿ ಬಹು ಬಲ್ಲಿದನೆನಿಪ – ನತಜನರಿಗೆ ಸುರಪ || ೧ || ಕಾಮಧೇನು ಸುರತರುವಿಗೆ ಸಮನೀತ ಕಾಮಿತ ಫಲದಾತ ರಾಮ ನರಹರಿ ಕೃಷ್ಣರ ಪದದೂತ ಲೋಕದಿ ಬಹು ಖ್ಯಾತ ಕಾಮಿನಿ ಸುತ ಧನ ಧಾನ್ಯದವ್ರಾತ ನೀಡುವೋ ನೀತ ಪ್ರೇಮದಿ ನಿಜಜನಸ್ತೋಮಕೆ ಬಹುದಾತ ಯತಿವರಕುಲನಾಥ || ೨ || ಪಾತಕವನಕುಲವೀತಿಹೋತ್ರನೆನಿಸೀ ಸುಖವನು ಸುರಿಸಿ ಭೂತಪ್ರೇತ ಮಹಭೀತಿಯ ಬ…
Transliteration
Nambi tutisiro raghavendra dhoreya sanmuni kulavarya || pa || Ambujanabanigati priya sajjanarige sahayya || a || Kanakasayyana tanujanagi janisi – narahari^^ayanu olisi Anujariganudina tattvava ta kalisi paramatavannu jayisi Manadali sri hari padavanne Bajisi varakarunava salisi Vanajabavandadi bahu ballidanenipa – natajanarige surapa || 1 || Kamadhenu surataruvige samanita kamita paladata Rama na…