Haridasa Sahitya — Vyasadasa
Nambi kettavarillavo rangayyana
ನಂಬಿ ಕೆಟ್ಟವರಿಲ್ಲವೊ ರಂಗಯ್ಯನ
Composer: Purandara Dasaru · Deity: Hari · Genre: Bhakti
Kannada lyrics
ನಂಬಿ ಕೆಟ್ಟವರಿಲ್ಲವೊ ರಂಗಯ್ಯನ ನಂಬದೆ ಕೆಟ್ಟರೆ ಕೆಡಲಿ ||pa|| ಅಂಬುಜನಾಭನ ಅಖಿಳ ಲೋಕೇಶನ ಅಪ್ರಮೇಯನಾದ ಆದಿಪುರುಷನ ||apa|| ಪಿತನ ತೊಡೆಯ ಮೇಲೆ ಧ್ರುವರಾಯ ಹಿತದಿಂದ ಕುಳಿತಿರಲು ಮತಿಹೀನಳಾದ ಸುರುಚಿದೇವಿ ನೂಕಲು ಹಿತದಿ ಧ್ರುವಗೆ ಪಟ್ಟ ಕೊಟ್ಟ ಮುರಾರಿಯ ||1|| ವರ ಪ್ರಹ್ಲಾದನ ಪಿತನು ಬಾಧಿಸುತಿರೆ ಹರಿ ನೀನೆ ಗತಿಯೆನಲು ಪರಮ ಪ್ರೀತಿಯಿಂದ ತರಳನ ಪಾಲಿಸಿ ದುರುಳ ಹಿರಣ್ಯಕಶ್ಯಪನ ಸೀಳಿದ ಧೊರೆಯ ||2|| ಕರಿರಾಜನ ಸಲಹಿ ಅಂಜದಿರೆಂದು ಅ- ದರಿಸಿದವರು ಯಾರೋ ಗರುಡಗಮನ ಶ್ರೀ ಪುರಂದರವಿಠಲನ ಚರಣಕಮಲವನ್ನು ದೃಢದಿಂದ ನಂಬಿರೊ||3|| Nambi kettavarillavo rangayyana Nambade kettare kedali ||pa||
Transliteration
Ambujanabana akila lokesana Aprameyanada adipurushana ||apa|| Pitana todeya mele dhruvaraya Hitadinda kulitiralu Matihinalada surucidevi nukalu Hitadi dhruvage patta kotta murariya ||1|| Vara prahladana pitanu badhisutire Hari nine gatiyenalu Parama pritiyinda taralana palisi Durula hiranyakasyapana silida dhoreya ||2|| Karirajana salahi anjadirendu a- Darisidavaru yaro Garudagamana sri purandarav…