Haridasa Sahitya — Vyasadasa
Nambi kettavarillavo
ನಂಬಿ ಕೆಟ್ಟವರಿಲ್ಲವೋ
Composer: Vyasarajaru · Deity: Raghavendra Teertharu · Genre: Dasara Pada
Kannada lyrics
ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ ನಂಬದೆ ಕೆಡುವುರುಂಟೋ ||pa|| ನಂಬಿದ ಜನರಿಗೆ – ಬೆಂಬಲ ತಾನಾಗಿ ಹಂಬಲಿಸಿದ ಫಲ – ತುಂಬಿ ಕೊಡುವರನ್ನ ||a.pa|| ಜಲಧರ ದ್ವಿಜವರಗೆ ತಾನೇ ಒಲಿದು ಸುಲಭದಿ ಮುಕುತಿಯನಿತ್ತ ಚಲುವ ಸುತನ ಪಡೆದಲಲನೆಗೆ ತ್ವರದಿಂದ ಪುಲಿನ ಗರ್ತದಿ ದಿವ್ಯ – ಜಲವ ನಿತ್ತವರನ್ನ ||1|| ಮೃತ್ಯುದೂತರು ತನ್ನನು ಪೊಂದಿದ ನಿಜ ಭೃತ್ಯನ ಕರೆದೊಯ್ಯಲು ಸತ್ತ ದ್ವಿಜನ ತಾನು – ಮತ್ತು ಧsರೆಗೆ ತಂದು ಮೃತ್ಯು ಬಿಡಿಸಿ ಸುಖ – ವಿತ್ತು ಪೊರೆದಿಹರನ್ನಾ ||2|| ಧಿಟ ಗುರುಜಗನ್ನಾಥ ವಿಠಲನೊಲಿಮೆ ಘಟನವಾದುದರಿಂದ ಘಟನಾಘಟನ ಕಾರ್ಯ – ಘಟನಾ ಮಾಡುವ ನಮ್ಮ ಪಟು ಗುರುವರ ಹೃ – ತ್ಪುಟ ದಿರುವೋರನ್ನ ||3||
Transliteration
Nambi kettavarillavo rayara pada nambi kettavarillavo nambida janarige bembala tanagi hambalisida phala tumbi koduvara || Jaladhara dvijavarage tane olidu sulabhadi mukutiyanitta cheluva sutana padeda lalanege svaradinda pulinagarpadi divya jalavanittavara ||1|| Mrutyudutaru tanna pondida nija bhaktara karedoyyalu satta dvijana tanu matte dharege tandu mrutyu bidisi sukhavittu poredihara ||2|| Dit…