Haridasa Sahitya — Vyasadasa
Nambadiru I deha nityavalla
ನಂಬದಿರು ಈ ದೇಹ ನಿತ್ಯವಲ್ಲ
Composer: Purandara Dasaru · Deity: Hari · Genre: Philosophy
Kannada lyrics
ನಂಬದಿರು ಈ ದೇಹ ನಿತ್ಯವಲ್ಲ ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆ ಎಲುವು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ ಒಳಗೆ ಮಲಮೂತ್ರಾದಿ ಕ್ರಿಮಿಗಳಿರವು ಹಲವು ವ್ಯಾಧಿಯ ಬೀಡು ಪಂಚಭೂತದನಾಡು ಬಲುಹು ದೇಹವ ನೆಚ್ಚಿ ಕೆಡಬೇಡ ಮನುಜ ಸತಿ ಸುತರು ಹಿತರೆಂದು ಮತಿ ಮರೆದು ಮಮತೆಯಲಿ ಅತಿಕಾಂಕ್ಷೆಯಿಂದ ದುರ್ವಿಷಯ ಬಲಿದು ಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದ ಗತಿಶೂನ್ಯನಾಗಿ ನೀ ಕೆಡಬೇಡ ಮನುಜ ಪರರ ನಿಂದಿಸದೆ ಪರವಧುಗಳನು ಬಯಸದೆ ಗುರುವಿಪ್ರ ಸೇವೆಯನು ಮಾಡು ಬಿಡದೆ ಹರಿ ಸ್ತುತಿಯ ನೀ ಕೇಳು ಹರಿ ಕೀರ್ತನೆಯ ಮಾಡು ಸಿರಿಪುರಂದರವಿಠಲನೊಲಿದು ಪಾಲಿಸುವ Nambadiru I deha nityavalla Ambujakshana Bajisi sukiyagu manave
Transliteration
Eluvu rakta mamsagala mele carmada hodike Olage malamutradi krimigaliravu Halavu vyadhiya bidu pancabutadanadu Baluhu dehava necci kedabeda manuja Sati sutaru hitarendu mati maredu mamateyali Atikamksheyinda durvishaya balidu Satata lakshmipatiya saranenade ihaparada Gatisunyanagi ni kedabeda manuja Parara nindisade paravadhugalanu bayasade Guruvipra seveyanu madu bidade Hari stutiya ni kelu hari…