Haridasa Sahitya — Vyasadasa
Namathraya nenayiro
ನಾಮತ್ರಯ ನೆನೆಯಿರೊ
Composer: Vijaya Dasaru · Deity: Hari · Genre: Bhakti
Kannada lyrics
ನಾಮತ್ರಯ ನೆನೆಯಿರೊ ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು ||pa|| ಅಚ್ಯುತಾ ಅಚ್ಯುತಾ ಎಂದು ಸ್ಮರಣೆಯನು ಮಾಡಿದರೆ ದುಶ್ಚರಿತವೆಂಬ ಮಹ ಕಾನನಕ್ಕೆ ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ ನಿಚ್ಚಳವಾಗಿದ್ದ ಸುಜ್ಞಾನ ಪಾಲಿಪದು||1|| ಅನಂತ ಅನಂತ ಎಂದು ಮನದಲ್ಲಿ ನೆನೆಯೆ ನಾನಾ ಭವಬಂಧ ದುಷ್ಕರ್ಮದಿ ಹೀನಾಯವನು ಕಳೆದು ಹಿತದಿಂದಲಿ ವೊಲಿದು ಆನಂದ ಆನಂದವಾದ ಫಲ ಕೊಡುವುದು. ||2|| ಗೋವಿಂದ ಗೋವಿಂದ ಎಂದು ಧ್ಯಾನವ ಮಾಡೆ ಗೋವಿಂದ ಕಡೆಹಾಕಿ ಸಾಕುವದು ದೇವೇಶ ಶಿರಪತಿ ವಿಜಯವಿಠ್ಠಲೇಶನ ಸೇವೆ ಸತ್ಕಾರ್ಯದಲಿ ಪರಿಪೂರ್ಣವಾಗಿಹುದು ||3||
Transliteration
Namatraya neneyirokamakrodhavu Haridu bailagi poguvudu ||pa|| “acyuta acyuta” endu smaraneyanu madidare Duscharitavemba maha kananakke Kiccagi dahisuvudu nimishadolage Suddha Niccalavagidda suj~jana palipadu||1|| “ananta ananta”endu manadalli neneye Nana Bavabandha dushkarmadi Hinayavanu kaledu hitadindali volidu Ananda anandavada Pala koduvudu||2|| “govinda govinda” endu dhyanava made Govinda kad…