Haridasa Sahitya — Vyasadasa

Namada ganate nimage

ನಾಮದಾ ಘನತೆ ನಿಮಗೆ

Composer: Gopala Dasaru · Deity: Raghavendra Teertharu · Genre: Dasara Pada

Kannada lyrics

ನಾಮದಾ ಘನತೆ ನಿಮಗೆ ಸಲ್ಲೋದೆ ಶ್ರೀಮ೦ತ ರಾಘವೇ೦ದ್ರ ಸ್ವಾಮಿ ಎ೦ತೆ೦ಬ || ಪ || ಅಲವಬೋಧರ ಭಾಷ್ಯಾ೦ಬುಧಿಗೆ ಟೀಕೆಗಳೆ೦ಬ ಲಲಿತಸೇತುವೆ ಕಟ್ಟಿ ಹರಿದಾಸರ ಸುಲಭದಿ೦ದೈದಿಸಿ ದಶಕರಣಗಳ ಜೈಸಿ ಒಲಿದೆ ಸವಿದೆ ವಿಷ್ಣುಜ್ಞಾನ ಪ್ರಕೃತಿಯನು || ೧ || ಹಲವು ದುರ್ಮತ ವಾದಿಗಳೆ೦ಬಾದ್ರಿಗಳ ಕುಲಿಶದಿ೦ದವರ ಪಕ್ಷ ಭೇದಿಸಿ ಅಲವಬೋಧರ ಮತ ಅಮರಾವತಿಯಲಿ ನಿ- ಶ್ಚಲ ಸಾಮ್ರಾಜ್ಯವನಾಳ್ದೆ – ಕವಿಗಳ ಪೊರೆದೆ || ೨ || ಭಾಸುರ ಸಚ್ಚಾಸ್ತ್ರ ವದನದಿ ಒಪ್ಪುತ ಪೂಶರಜಯ ಶಕ್ತಿಯನೆ ಧರಿಸಿದೆ ವಾಸವ ಸಖ ಗುರುಗೋಪಾಲವಿಠ್ಠಲನ ದಾಸ ಶ್ರೀ ಸುಧೀ೦ದ್ರಕುಮಾರ ಸ್ವಾಮಿ ರಾಘವೇ೦ದ್ರ || ೩ ||

Transliteration

Namada Ganate nimage sallode Srimanta ragavendra svami entenba || pa || Alavabodhara bashyanbudhige tikegalenba Lalitasetuve katti haridasara Sulabadindaidisi dasakaranagala jaisi Olide savide vishnuj~jana prakrutiyanu || 1 || Halavu durmata vadigalenbadrigala Kulisadindavara paksha bedisi Alavabodhara mata amaravatiyali ni- Scala samrajyavanalde – kavigala porede || 2 || Basura saccastra vadanadi…