Haridasa Sahitya — Vyasadasa
Nalidaade enna naalige
ನಲಿದಾದೇ ಎನ್ನ ನಾಲಿಗೇ ಮೇಲೇ ಶಾರದಾ ದೇವಿ |
Composer: Sripadarajaru · Deity: Saraswati Devi · Genre: Bhakti
Kannada lyrics
ನಲಿದಾಡೇ ಎನ್ನ ನಾಲಗೆ ಮ್ಯಾಲೆ | ಶಾರದಾದೇವಿ || ಕುಣಿದಾಡೆ ಎನ್ನ ನಾಲಗೆ ಮ್ಯಾಲೆ | ಸರಸ್ವತಿ ದೇವಿ|| ಘಿಲು ಘಿಲು ಘಿಲು ಗೆಜ್ಜೆಯ ನಾದ | ಹೊಳೆವ ಅಂದುಗೆ ರುಳಿ ಪೈಂಜಣವಿಟ್ಟ ಪುಟ್ಟ ಪಾದ | ಸುರವರನುತ ಪಾದ ಸರಸಿಜೋದ್ಭವನ ವದನ ನಿಲಯಳೆ| ಕರುಣದಿಂದ ಪರಿಪಾಲಿಸು ಮಾತೆ ||೧|| ನಸುನಗೆ ಮುಖವು ನಾಸಾಭರಣ | ಎಸೆವ ಕಪೋಲ ಹೊಸ ಮುತ್ತಿನ ಚಳ ತುಂಬಿಟ್ಟ ಶ್ರವಣ | ತಿಲಕವು ಹಸನ ಶಶಿ ಸೂರ್ಯರ ಆಭರಣ ಶೋಭಿತಳೆ | ಕುಸುಮ ಮುಡಿದ ಮೂರ್ಧ್ವಜವುಳ್ಳವಳೆ ||೨|| ಶೃಂಗಾರವಾದ ಜಡೆ ಬಂಗಾರ | ರಾಗುಟಿ ಶೌರಿ ಹೊಂಗ್ಯಾದಿಗೆ ಗೊಂಡೆ ಮುತ್ತಿನ ಹಾರ ರಂಗು ಮನೋಹರ | ಮಂದಗಮನೆ ಅರವಿಂದ ನಯನ ಸಿರಿ | ರಂಗ ವಿಟ್ಟಲನ ತೋರೇ ಶುಭಾಂಗಿ ||೩||
Transliteration
Nalidaade enna naalige mele shaaradaa devi | kunidaade enna naalige mele || pa || Ghilu ghilu ghilu gejjeya naada | poleva anmduge ruli paijanavitta putta paada | sarasijodbhavana vadana nilayale karunadinda paripaalisu maate || 1 || Nasunage mukhavu naasaabharana | eseva kapola | hosa muttina chala tumbitta shravana | tilakavoo hasana | shashi sooryara aabharana shobhitale | kusuma mudida moordhw…