Haridasa Sahitya — Vyasadasa
Nageyu barutide enage nageyu
ನಗೆಯು ಬರುತಿದೆ ಎನಗೆ ನಗೆಯು
Composer: Purandara Dasaru · Deity: Hari · Genre: Philosophy
Kannada lyrics
ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ಜಗದೊಳಿರುವ ಜಾಣರೆಲ್ಲ ಹಗರಣ ಮಾಡುವುದನೆ ಕಂಡು ಪರರ ವನಿತೆಯೊಲುಮೆಗೊಲಿದು ಹರುಷದಿಂದ ಅವಳ ಬೆರೆದು ಹರಿವ ನೀರೊಳಗೆ ಮುಳುಗಿ ಬೆರಳನೆಣಿಸುತಿಹರ ಕಂಡು ಪತಿಯ ಸೇವೆ ಬಿಟ್ಟಿ ಪರ ಪತಿಯ ಕೂಡೆ ಸರಸವಾಡಿ ಸತತ ಮೈಯ ತೊಳೆದು ಹಲವು ವ್ರತವ ಮಾಳ್ಪ ಸತಿಯ ಕಂಡು ಹೀನ ಗುಣದ ಮನದೊಳಿಟ್ಟು ತಾನು ವಿಷದ ಪುಂಜನಾಗಿ ಮೌನಿ ಪುರಂದರವಿಠಲನ್ನ ಧ್ಯಾನ ಮಾಡುವವನ ಕಂಡು Nageyu barutide enage nageyu barutide
Transliteration
Jagadoliruva janarella hagarana maduvudane kandu Parara vaniteyolumegolidu Harushadinda avala beredu Hariva nirolage mulugi Beralanenisutihara kandu Patiya seve bitti para Patiya kude sarasavadi Satata maiya toledu halavu Vratava malpa satiya kandu Hina gunada manadolittu Tanu vishada punjanagi Mauni purandaravithalanna Dhyana maduvavana kandu Tala beku takka mela beku santa