Haridasa Sahitya — Vyasadasa
Nadhi taratamya by Jagannatha dasaru
ಭಾಗೀರಥ್ಯಾದಿ ನದಿಗಳ ತಾರತಮ್ಯ ನಿಜ
Composer: Jagannatha Dasaru · Deity: Vishnu · Genre: Dasara Pada
Kannada lyrics
ಭಾಗೀರಥ್ಯಾದಿ ನದಿಗಳ ತಾರತಮ್ಯ ನಿಜ ಭಾಗವತ ತಿಲಕ ನಿಮಿರಾಜಗೊಲಿದು ವಸಿಷ್ಠ ಯೋಗೀಶ ಪೇಳ್ದ ಸುಕಥಾಕುತೂಹಲವನು ರಾಗದಲಿ ಕೇಳಿ ಜನರಯ್ಯಾ ||pa|| ಒಂದು ದಿನ ಗೋದಾವರಿಯ ತಟದಿ ನಿಮಿರಾಜ ಸಂದು ಯಜ್ಞವ ಮಾಡುತಿರಲಾಗ ಪರಮೇಷ್ಠಿ ನಂದನೆನಿಪ ವಶಿಷ್ಠ ಮಹಮುನಿ ನಡೆತಂದ ಮೇಧಾಗಾರಕೆ ಬಂದ ಯತಿವರನ ಮಣಿಪೀಠದಲಿ ಕುಳ್ಳಿರಿಸಿ ಮಂದಹಾಸದಲಿ ತನ್ನಯ ಮನೋವಾಂಛಿತವ ಸುಂದರಾಧಿಪ ಬೆಸಸಿದಾ ||1|| ವ್ರತಿಪತಿ ವಶಿಷ್ಠ ವೈಷ್ಣವಕುಲ ಶಿರೋರತುನ ಶ್ರುತಿಶಾಸ್ತ್ರ ಸರ್ವಜ್ಞ ಗಂಗಾದಿ ಪುಣ್ಯತೀ ರ್ಥ ತಾರತಮ್ಯ ಎನಗರುಪು ಕರುಣದಲೀ ಮತ್ಪಿತನೆನುತ ಪದಕೆರಗುವಾ ಕ್ಷಿತಿಪನೋಕ್ತಿಯ ಕೇಳುತಾನಂದ ಶರಧಿಯೊಳು ಗತನಾಗಿ ರೋಮ ಲಕ್ಷಣ ಕಳೇವರದಿ ಪುಳ ಕಿತವಾದವನ ಕಾರುಣ…
Transliteration
BAgIrathyAdi nadigaLa tAratamya nija BAgavata tilaka nimirAjagolidu vasiShTha yOgISa pELda sukathAkutUhalavanu rAgadali kELi janarayyA ||pa|| ondu dina gOdAvariya taTadi nimirAja sandu yaj~java mADutiralAga paramEShThi nandanenipa vaSiShTha mahamuni naDetanda mEdhAgArake banda yativarana maNipIThadali kuLLirisi mandahAsadali tannaya manOvAnChitava sundarAdhipa besasidA ||1|| vratipati vaSiShTha va…