Haridasa Sahitya — Vyasadasa

Nadedhu baramma

ನಡೆದು ಬಾಮ್ಮ

Composer: Haridasa · Deity: Lakshmi Devi · Genre: Dasara Pada

Kannada lyrics

ನಡೆದು ಬಾಮ್ಮ ಲಕ್ಷ್ಮೀ ನಿನಗೆ ನಡೆಮುಡಿಯ ಹಾಸುವೆ| ನಡೆಮುಡಿಯ ಹಾಸಿ ನಾ ಚರಣ ಕಮಲಕ್ಕೆರಗುವೆ|| ಮರುಗ,ಮಲ್ಲಿಗೆ,ಧವನ,ಸಂಪಿಗೆ ಸರಗಳ್ಲನೇ ಪೂಜಿಪೆ| ಸರಗಳ್ಲನೇ ಪೂಜಿಸಿ ನಾ ವರಗಳ್ಲನ್ನೇ ಬೇಡುವೆ|| ಹೀರೆ,ಕುಂಬಳ ಕಾಯಿ,ಪಡವಳ ಶಾಖ ಪಾಕವ ಮಾಡುವೆ| ಘನ್ನ ಶಾವಿಗೆ ಭಕ್ಷವು ನೈವೇದ್ಯವು ಪರಮಾನ್ನವು|| ಎಷ್ಟು ಬೇಡಿದರು ದಯ ಏಕೆ ಬರಲಿಲ್ಲ ಲಕ್ಷ್ಮೀ ನಿನಗೆ| ದಿಟ್ಟ ಪ್ರಸ್ಸನ್ನ ವೆಂಕಟ ವಿಟ್ಟಲನ ಪಟ್ಟದರಾಣಿಯೆ|| Nadedu baramma lakshmi ninage Nademudiya hasuve| Nademudiya hasi na Charana kamalakkeraguve||

Transliteration

Maruga,mallige,dhavana,sampige Saragallane pujipe| Saragallane pujisi Na varagallanne beduve||1|| Hire,kumbala kayi,padavala Saka pakava maduve| Ganna savige bakshavu Naivedyavu paramannavu||2|| Eshtu bedidaru daya Eke baralilla Lakshmi ninage| Ditta prassanna venkata vittalana Pattada raniye||3||