Haridasa Sahitya — Vyasadasa

Nadate hinanadarenayya

ನಡತೆ ಹೀನನಾದರೇನಯ್ಯ

Composer: Kanakadasaru · Deity: Hari · Genre: Bhakti

Kannada lyrics

ನಡತೆ ಹೀನನಾದರೇನಯ್ಯ ಜಗ ದೊಡೆಯನ ಭಕುತಿ ಇದ್ದರೆ ಸಾಲದೆ ।।ಪ।। ಪುಂಡರಾ ಪಾಂಡುನಂದನರು ಮತ್ತದರೊಳು ಕಂಡೋರ್ವಳೈವರು ಭೋಗಿಪರು ಖಂಡಿಸಿದರು ರಣದೊಳು ಗುರುಹಿರಿಯರ ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ ।।೧।। ಒಂದೊಂದು ಪರಿ ಬುದ್ಧಿಯ ಹೇಳಿ ಹಿರಣ್ಯಕ ಕಂದನ ನಿರ್ಬಂಧಿಸುತಿರಲು ಅಂದು ಸಾಧಿಸಲು ಕಂಬದ ಬಳಿಯೆ ತನ್ನ ತಂದೆಯ ಕೊಲಿಸಿದನೆಂಬರು ಜನರು ।।೨।। ದಾಸಿಯ ಜಠರದೊಳು ಜನಿಸಿದ ವಿದುರ ಸ ನ್ಯಾಸಿಯೆಂದೆನಿಸಿಕೊಂಡ ಸಾಸಿರನಾಮದೊಡೆಯ ಕೃಷ್ಣ ಬಾಡದಾದಿ ಕೇಶವನ ಭಕುತಿಯೊಂದಿದ್ದರೆ ಸಾಲದೆ ।।೩।।

Transliteration

Nadate hinanadarenayya jaga Dodeyana Bakuti iddare salade ||pa|| Pundara pandunandanaru mattadarolu Kandorvalaivaru bogiparu Kandisidaru ranadolu guruhiriyara Pundarikakshana olumeyomdallade ||1|| Ondondu pari buddhiya heli hiranyaka Kandana nirbamdhisutiralu Andu sadhisalu kambada baliye tanna Tandeya kolisidanembaru janaru ||2|| Dasiya jatharadolu janisida vidura sa Nyasiyendenisi konda Sasirana…