Haridasa Sahitya — Vyasadasa

Naa ninagenu

ನಾ ನಿನಗೇನೂ

Composer: Sripadarajaru · Deity: Vishnu · Genre: Dasara Pada

Kannada lyrics

ನಾ ನಿನಗೇನೂ ಬೇಡುವದಿಲ್ಲ, ಎನ್ನ ಹೃದಯಕಮಲದೊಳು ನಿಂದಿರೊ ಹರಿಯೆ ||ಪ|| ಶಿರ ನಿನ್ನ ಚರಣದಲ್ಲೆರಗಲಿ, ಎನ್ನ ಚಕ್ಷುಗಳು ನಿನ್ನ ನೋಡಲಿ ಹರಿಯೆ ಕರ್ಣ ಗೀತಂಗಳ ಕೇಳಲಿ , ಎನ್ನ ನಾಸಿಕ ನಿರ್ಮಾಲ್ಯ ಘ್ರಾಣಿಸಲಿ ಹರಿಯೆ ||೧|| ನಾಲಿಗೆ ನಿನ್ನ ಕೊಂಡಾಡಲಿ, ಎನ್ನ ಕರಗಳೆರಡು ನಿನಗೆ ಮುಗಿಯಲಿ ಹರಿಯೆ ಪಾದ ತೀರ್ಥಯಾತ್ರೆ ಹೋಗಲಿ, ನಿನ್ನ ಧ್ಯಾನ ಎನಗೊಂದು ಕೊಡು ಕಂಡ್ಯ ಹರಿಯೆ ||೨|| ಬುದ್ಧಿ ನಿನ್ನೊಳು ಕುಣಿದಾಡಲಿ, ಎನ್ನ ಚಿತ್ತ ನಿನ್ನಲಿ ನಲಿದಾಡಲಿ ಹರಿಯೆ ಭಕ್ತಜನರ ಸಂಗವು ದೊರಕಲಿ , ರಂಗ – ವಿಠಲ ನಿನ್ನ ದಯವಾಗಲಿ ಹರಿಯೆ ||೩||

Transliteration

Naa ninagenu beduvudilla enna || pa || Hrudayamantapadolu nindiro krushna || a.pa || Shira ninna caranadalleragali, enna | chakshugalu ninna nodali | karna geetangala kelali enna | naasika nirmaalyaaghraanisali krushna || 1 || Naalige ninna kondaadali enna | karagaleradu ninage mugiyali | paadateerthayaatre maadali ninna | dhyaanavondu enage kodukandya hariye || 2 || Buddhi ninnolu kunidaadali enn…