Haridasa Sahitya — Vyasadasa

Naa madida karma

ನಾ ಮಾಡಿದ ಕರ್ಮ

Composer: Purandara Dasaru · Deity: Hari · Genre: Philosophy

Kannada lyrics

ನಾ ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವದೇನೊ ದೇವ ಸಾಮಾನ್ಯವಲ್ಲವಿದು ಬ್ರಹ್ಮ ಬರೆದ ಬರಹ ನೇಮದಿಂದಲಿ ಎನ್ನ ಹಣಿಯಲಲ್ಲಿ ಬರೆದುದಕೆ ಅನ್ನಪಾನಂಗಳಿಗೆ ಅಗ್ರಗಣ್ಯನಾಗಿ ಸ್ನಾನ ಸಂಧ್ಯಾನ ಜಪತಪ ನೀಗಿ ದಾನವಂತಕ ನಿನ್ನ ಧ್ಯಾನವ ಮಾಡದೆ ಶ್ವಾನನಂತೆ ಮನೆಮನೆಯ ತಿರುಗುತಲಿದ್ದೆ ಅತಿಥಿಗಲಿಗೆ ಅನ್ನ ಕೊಟ್ಟವನಲ್ಲ ಪರ- ಸತಿಯರ ಸಂಗ ಅರಘಳಿಗೆ ಬಿಟ್ಟವನಲ್ಲ ಮತಿಹೀನ ನಾನಾಗಿ ಮರುಳಾಗಿದ್ದೆನೊ ದೇವ ಗತಿ ಯಾವುದೆನಗಿನ್ನು ಗರುಡುಗಮನ ಕೃಷ್ಣ ಇನ್ನಾದರು ನಿನ್ನ ದಾಸರ ಸಂಗವಿತ್ತು ಮನ್ನಿಸಿ ಸಲಹಯ್ಯ ಮನ್ಮಥಜನಕ ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ ಪನ್ನಂಗಶಯನ ಶ್ರೀ ಪ್ರುರಂದರವಿಠಲ

Transliteration

Naa Madida Karma Balavantavadare Nee Maduvudeno Deva Asamanyavallavidu Brahma Bareda Baraha Nemadindali Nanna Haneyalli Baredudake Anna Panangalige Agraganyanagi, Snana Sandhyana Japa Tapa Nigi Danavantaka Ninna Dhyanava Madade Swananante Manemaneya Tirugutalidde|| Athithigalige Anna Kottavanalla Para Satiyara Sangha Araghalige Bittavanalla Matihina Nanagi Marulagiddeno Deva Gati Yavudenaginnu Gar…