Haridasa Sahitya — Vyasadasa
Muttu yuvatiya Sabda kelidare papa
ಮುಟ್ಟು ಯುವತಿಯ ಶಬ್ದ ಕೇಳಿದರೆ ಪಾಪ
Composer: Purandara Dasaru · Deity: Hari · Genre: Ugabhoga
Kannada lyrics
ಮುಟ್ಟು ಯುವತಿಯ ಶಬ್ದ ಕೇಳಿದರೆ ಪಾಪ ಎಂಟೆರಡು ಮೂರಾಚಮನಕೆ ಪರಿಹರವೊ ದೃಷ್ಟಿಸಿ ನೋಡಿದರೆ ಥಟ್ಟನೆ ಜಲದಲ್ಲಿ ಐನೂರು ಸ್ನಾನದಿ ಶುದ್ಧ ಮೆಟ್ಟಿದಡೆ ಕುಳಿತ ಸ್ಥಳ ಮೂರುದಿನ ವರ್ಜಿಸಲುಬೇಕು ಉಚ್ಚಿಷ್ಟ ಸೋಂಕಲು ಐದು ನಿರಾಹಾರವಣ್ಣ ಇಷ್ಟು ಮಾಡಿದರೆ ಪಾಪ ಪರಿಹರವಯ್ಯ ಶಿಷ್ಟರಲ್ಲದೆ ಮತ್ತು ಎಲ್ಲವರಿಗೆ ಅಸಾಧ್ಯವಿದು ಗಟ್ಟ್ಯಾಗಿ ಜಗನ್ನಾಥ ಎಂದರೆ ಮುಟ್ಟಲಂಜುವುದಘವು ಓಡಿಪೋಗುವುದಯ್ಯ ಇಷ್ಟೆಲ್ಲ ಒಂದೆ ಮಾತ್ರದಿ ಪದ್ಮಪುರಾಣವ ವಿಚಾರಿಸು ಮನುಜ ಅಲ್ಲಿ ಸ್ಪಷ್ಟವಾಗಿ ಪೇಳುವುದು ವಚನ ಜಗನ್ನಾಥನ ನಂಬುವರೆ ಎಲ್ಲ ಕೇಳಿರಯ್ಯ ಗುರು ಪುರಂದರವಿಠಲನ ಪದವಿಯ ಬೇಡುವರು ||
Transliteration
Muttu yuvatiya Sabda kelidare papa Enteradu muracamanake pariharavo Drushtisi nodidare thattane jaladalli ainuru snanadi Suddha Mettidade kulita sthala murudina varjisalubeku Uccishta sonkalu aidu niraharavanna Ishtu madidare papa pariharavayya Sishtarallade mattu ellavarige asadhyavidu Gattyagi jagannatha endare Muttalanjuvudagavu odipoguvudayya Ishtella onde matradi padmapuranava vicarisu manuja…